ದಾನ-ಧರ್ಮದಿಂದ ಮಹತ್ಕಾರ್ಯ ಸಾಧ್ಯ: ಪ್ರಭುಜಿ ಬೆನ್ನಾಳೆ
ರಬಕವಿ-ಬನಹಟ್ಟಿ,ಡಿ4: ದಾನ-ಧರ್ಮಗಳಿಂದ ಸಮಾಜದಲ್ಲಿ ಮಹತ್ಕಾರ್ಯ ಸಾಧಿಸಲು ಸಾಧ್ಯವಾಗುತ್ತದೆ. ದಾನಿಗಳಿಂದ ದೊರೆಯುವ ದಾನದಿಂದ ಸಮಾಜದಲ್ಲಿ ಮಠ, ಆಶ್ರಮ, ಮಂದಿರ, ಕುಟೀರಗಳನ್ನು ನಿರ್ಮಿಸಲು ಅನುವುವಾಗುತ್ತದೆಂದು ಹಿಪ್ಪರಗಿ ಶ್ರೀ ಸಂಗಮೇಶ್ವರ ಮಠದ ಪ್ರಭು ಬೆನ್ನಾಳೆ ಮಹಾರಾಜರು ಹೇಳಿದರು
ಬನಹಟ್ಟಿ ನಗರದ ನಾಮದೇವ ಗಲ್ಲಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹಿರಿಯ ಪತ್ರಕರ್ತರಾಗಿದ್ದ ದಿ. ಭಾಸ್ಕರಪ್ಪ ಕೋಪರ್ಡೆ ಮಹಾರಾಜರು ದಾನವಾಗಿ ನೀಡಿದ ಜಾಗದಲ್ಲಿ ನಿರ್ಮಿಸುತ್ತಿರುವ ಶ್ರೀ ಗಿರೀಶ ಆಶ್ರಮದ ಕಟ್ಟಡ ಕಾರ್ಯಕ್ಕೆ ಬನಹಟ್ಟಿ ನಾಮದೇವ ಶಿಂಪಿ ಸಮಾಜದ ಬಾಂಧವರು ನೀಡಿದ ರೂ. 1 ಲಕ್ಷ ರೂಪಾಯಿಗಳನ್ನು ಶ್ರೀ ವಿಠ್ಠಲ ಮಂದಿರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸ್ವೀಕರಿಸಿ ಮಾತನಾಡಿದರು.
ನಾಮದೇವ ಶಿಂಪಿ ಸಮಾಜದ ಮಹಾಲಿಂಗ ಹಾಸಿಲಕರ ರೂ. 5 ಸಾವಿರ ದೇಣಿಗೆ ನೀಡಿದರು. ಇದೇ ಸಂದರ್ಭ ನಾಮದೇವ ಶಿಂಪಿ ಸಮಾಜದ ಅಧ್ಯಕ್ಷ ಕುಮಾರ ಬಕರೆ, ಪತ್ರಕರ್ತ ಪ್ರಭು ಭಾಸ್ಕರ ಕೋಪರ್ಡೆ, ನಾಗಪ್ಪ ಬಕರೆ, ವಿಜಯ ಕೋಪರ್ಡೆ, ಬಾಳಕೃಷ್ಣ ಹಾಸೀಲಕರ, ವಿಠ್ಠಲ ಬಕರೆ, ರಾಮ ಕೋಪರ್ಡೆ, ಚಂದ್ರಶೇಖರ ಹಾಸೀಲಕರ, ಶಂಕರ ಕೋಪರ್ಡೆ ಸೇರಿದಂತೆ ನಾಮದೇವ ಶಿಂಪಿ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

Social Plugin