ಜಗದಾಳ ಗ್ರಾಮದ ಎಸ್. ವಿ. ಘೋರ್ಪಡೆ ರಾಮೇಶ್ವರ ಶಾಸ್ತ್ರೆಯವರ ಮನೆಯಂಗಳದಲ್ಲಿ ಕಾರ್ತಿಕ ಮಾಸದಲ್ಲಿ ಗೌರಿಹುಣ್ಣಿಮೆಗೆಂದೇ ನಿಸರ್ಗಕೂಡಾ ಗೌರಿ ಫಲೆಂದು ಮಾವಿನ ಮರದಲ್ಲಿ ಹೂ ಹಾಗೂ ಕಾಯಿಗಳು ಬಿಟ್ಟ ಚಿತ್ರ.
ಗೌರಿಫಲವೆಂದು ಮಾವಿನ ಮರದಲ್ಲಿ ಅವಧಿಗೆ ಮುಂಚೆ ಹೂ ಕಾಯಿ
ರಬಕವಿ-ಬನಹಟ್ಟಿ,ಡಿ4: ನಿಸರ್ಗದಲ್ಲಿಯೂ ಕೂಡಾ ಸಂಪ್ರದಾಯ ಅಡಗಿದೆ ಎನ್ನುವುದಕ್ಕೆ ಈ ಮಾವಿನ ಮರಗಳು ಬಿಡುವ ಹೂ, ಕಾಯಿಗಳೆ ಕಾರಣ ಎಂದು ಜಗದಾಳ ಗ್ರಾಮದ ಹೆಸರಾಂತ ಜ್ಯೋತಿಷಿ ಎಸ್. ವಿ. ಘೋರ್ಪಡೆ ಮಹಾರಾಜರು ಹೇಳಿದರು.
ಗುರುವಾರ ಕಾರ್ತಿಕ ಮಾಸ ನಿಮಿತ್ತ ಆಶ್ರಮದಲ್ಲಿ ಹಮ್ಮಿಕೊಂಡ ದೇವಿ ಪೂಜಾ ಸಮಾರಂಭ ನಂತರ ಅವರು ಮಾತನಾಡಿ, ಭೂ ಮಂಡಲ ನಿರ್ಮಾಣವಾದಾಗಿನಿಂದ ಈ ನಿಸರ್ಗ ಮಾನವ ಕುಲಕ್ಕೆ ಅನೇಕ ಕೊಡುಗೆಗಳನ್ನು ಕೊಡುತ್ತಾ ಬಂದಿದೆ, ಅದರಂತೆ ಸಂಪ್ರದಾಯದಂತೆ ಗೌರಿ ಹುಣ್ಣಿಮೆಗೆ ಗೌರಿ ಬಯಕೆಗಳು ಎಂಬ ನಮ್ಮೆಲ್ಲರ ನಂಬಿಕೆಯಂತೆ ಗೌರಿ ಫಲವೆಂದು ಮಾವಿನ ಮರಗಳು ಹೂ ಹಾಗೂ ಕಾಯಿಗಳು ಆಗುವುದು ನಿಸರ್ಗ ಮಾನವ ಕುಲಕ್ಕೆ ಕೊಡುವ ಅಪರೂಪದ ಕೊಡುಗೆಯಾಗಿದೆ ಎಂದರು.

Social Plugin