ಬನಹಟ್ಟಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಮಾತನಾಡಿದರು.

ಮಗು ಕೊಲೆಗೆ ಕಾರಣರಾದ ಶಾಸಕರ ಬಂಧನವಾಗಲೇಬೇಕು-ಡಿಕೆಶಿ

ರಬಕವಿ-ಬನಹಟ್ಟಿ,ಡಿ5: ಮಹಾಲಿಂಗಪೂರದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸಂದರ್ಭ ಗರ್ಭೀಣಿ ಮಹಿಳೆ ಮೇಲೆ ದೌರ್ಜನ್ಯ ಹಾಗು ಗರ್ಭಪಾತವಾಗುವಲ್ಲಿ ಕಾರಣವಾಗಿ ಒಂದು ಮಗುವಿನ ಕೊಲೆಗೆ ಕಾರಣರಾದ ಶಾಸಕ ಸಿದ್ದು ಸವದಿಯವರ ಬಂಧನ ಮಾಡುವಲ್ಲಿ ಸರ್ಕಾರ ಹಿಂದೇಟು ಹಾಕುತ್ತಿರುವದು ಸರಿಯಲ್ಲ. ಕೂಡಲೇ ಬಂಧನವಾಗಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸರ್ಕಾರದ ವಿರುದ್ಧ ಕಿಡಿಕಾರಿದರು.

ಬನಹಟ್ಟಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮರ್ಪಕವಾದ ದಾಖಲೆಗಳಿದ್ದರೂ ಸ್ವಪಕ್ಷದ ಶಾಸಕರೆಂಬ ಒಂದೇ ಉದ್ದೇಶಕ್ಕಾಗಿ ಇಂತಹ ಕೃತ್ಯ ನಡೆದರೂ ರಕ್ಷಣೆಗಿಳಿದಿರುವ ಬಿಜೆಪಿಯ ನಾಚಿಕೆಗೇಡಿನ ಸಂಗತಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭಂಗ ತರುವಂಥದ್ದು, ಸವದಿ ಬಂಧನದ ಜೊತೆಗೆ ಕಾನೂನು ಕ್ರಮ ನಡೆಯಬೇಕೆಂದರು.

ಘಟನೆಗೆ ಸಂಬಂಧ ಚಾಂದನಿ ನಾಯಕ ಅವರ ಪತಿಯನ್ನು ಹೆದರಿಸಿ ಪರವಾದ ಹೇಳಿಕೆ ನೀಡುವಂತೆ ಬಿಜೆಪಿ ನಾಯಕರು ಒತ್ತಡ ಹೇರಿದ್ದಲ್ಲದೆ ಗುತ್ತಿಗೆದಾರನಾಗಿದ್ದು, ನಿನ್ನ ಬಿಲ್ ಹಣವನ್ನು ಯಾವದೂ ನೀಡುವದಿಲ್ಲವೆಂದು ಬೆದರಿಕೆಯೊಡ್ಡುವಲ್ಲಿ ಬಿಜೆಪಿಗರು ಕಾರಣವಾಗಿದ್ದಾರೆ. 

ಮಹಾಲಿಂಗಪೂರದಲ್ಲಿ ನಡೆಯುವ ಪ್ರತಿಭಟನೆ ಸಂಘ-ಸಂಸ್ಥೆ, ಸಮಾಜದ ಪರವಾದ ಹೋರಾಟವಾಗಿದೆ. ಘಟನೆಯಾಗಿದ್ದು ನಿಜವಾಗಿದ್ದರೂ ಸರ್ಕಾರ ಕೈಕಟ್ಟಿ ಕುಳಿತಿರುವದು ನಿಜಕ್ಕೂ ನಾಚಿಕಗೇಡಿನ ಸಂಗತಿಯೆಂದರು.