ರಬಕವಿ-ಬನಹಟ್ಟಿ ತಾಲೂಕಿನ ಗೊಲಭಾಂವಿ ರಸ್ತೆಯಲ್ಲಿ ವಿದ್ಯುತ್ ತಂತಿ ಸ್ಪರ್ಶಗೊಂಡ ಪರಿಣಾಮ ಕಬ್ಬಿನ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ವಿದ್ಯುತ್ ತಂತಿ ತಗುಲಿ ಅವಘಡ
ರಬಕವಿ-ಬನಹಟ್ಟಿ,ಡಿ4: ಟ್ರ್ಯಾಕ್ಟರ್ ಮೂಲಕ ಭಾರಿ ಗಾತ್ರದ ಕಬ್ಬಿನ ಟ್ರ್ಯಾಲಿ ಹೊತ್ತು ರಸ್ತೆಗಿಳಿದ ಸಂದರ್ಭ ಅಡ್ಡಲಾಗಿ ಸಂಪರ್ಕ ಹೊಂದಿದ್ದ ವಿದ್ಯುತ್ ತಂತಿ ಟ್ರ್ಯಾಲಿಯಲ್ಲಿದ್ದ ಕಬ್ಬಿಗೆ ತಗುಲಿ ಬೆಂಕಿಯ ಕಿಡಿಗೆ ಕಬ್ಬಿಗೆ ಅಗ್ನಿ ಅವಘಡ ಸಂಭವಿಸಿದ ಘಟನೆ ಶುಕ್ರವಾರ ನಡೆದಿದೆ.
ರಬಕವಿ-ಬನಹಟ್ಟಿ ತಾಲೂಕಿನ ಗೊಲಭಾಂವಿ ರಸ್ತೆಯಲ್ಲಿ ಬಾಹುಬಲಿ ಆಲಗೂರ ಎಂಬುವರಿಗೆ ಸೇರಿದ ಕಬ್ಬು ಸಕ್ಕರೆ ಕಾರ್ಖಾನೆಗೆ ರವಾನೆಯಾಗುತ್ತಿತ್ತು. ಈ ಸಂದರ್ಭ ಅನಿಯಮಿತವಾಗಿ ಹೇರಿದ ಭಾರ ಹಾಗು ಎತ್ತರವೂ ಹೆಚ್ಚಾದ ಕಾರಣ ಮೇಲಿದ್ದ ವಿದ್ಯುತ್ ತಂತಿ ಒಂದೊಕ್ಕೊಂದು ತಾಕಿ ಸ್ಪರ್ಶಗೊಂಡ ಕಾರಣ ಟ್ರ್ಯಾಲಿಯಲ್ಲಿದ್ದ ಕಬ್ಬಿಗೆ ಬೆಂಕಿ ಹತ್ತಿಕೊಂಡಿತ್ತು.
ಸಕಾಲಕ್ಕೆ ಆಗಮಿಸಿದ ಅಗ್ನಿ ಶ್ಯಾಮಕ ದಳದ ಸಿಬ್ಬಂದಿಗಳು ಅಗ್ನಿ ನಂದಿಸಿದ್ದಲ್ಲದೆ ಭಾರಿ ಹಾನಿಯನ್ನು ತಡೆಯುವಲ್ಲಿ ಯಶಸ್ವಿಯಾದರು.

Social Plugin