ಮಹಾಲಿಂಗಪೂರದಲ್ಲಿ ನಡೆಯುವ ಪ್ರತಿಭಟನೆಗೆ ಪರವಾಣಿಗೆ ನೀಡಬಾರದು ಎಂದು ಉಪತಹಶೀಲ್ದಾರರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ತೇರದಾಳದ ಭಾಜಪ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಮಹಾಲಿಂಗಪೂರದಲ್ಲಿ ನಡೆಯುವ ಪ್ರತಿಭಟನೆಗೆ ಪರವಾಣಿಗೆ ನೀಡಬಾರದು ಭಾಜಪ ಕಾರ್ಯಕರ್ತರ ಮನವಿ
ತೇರದಾಳ : ಮಹಾಲಿಂಗಪೂರದಲ್ಲಿ ಶನಿವಾರ ನಡೆಯುವ ಕಾಂಗ್ರೆಸ್ ಪಕ್ಷದ ಪ್ರತಿಭಟನಾ ರ್ಯಾಲಿಗೆ ಪರವಾಣಿಗೆ ನೀಡಬಾರದು ಎಂದು ಉಪತಹಶೀಲ್ದಾರ ಎಸ್.ಬಿ.ಮಾಯನ್ನವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ತೇರದಾಳದ ಭಾಜಪ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಶನಿವಾರದಂದು ತೇರದಾಳ ಮತಕ್ಷೇತ್ರದ ಮಹಾಲಿಂಗಪೂರದಲ್ಲಿ ಕಾಂಗ್ರೆಸ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಂಡಿದೆ. ಇದು ಒಬ್ಬ ವ್ಯಕ್ತಿಯ ತೇಜೋವಧೆ ಮಾಡುವ ಉದ್ದೇಶದಿಂದ ಹಾಗೂ ರಾಜಕೀಯ ದುರುದ್ದೇಶದಿಂದ ಮತ್ತು ತನ್ನ ಸ್ವಾರ್ಥ ಸಾಧನೆಗೋಸ್ಕರ ಮಾಜಿ ಸಚಿವೆ ಉಮಾಶ್ರೀ ಅವರ ದುರುದ್ದೇಶವಾಗಿದೆ. ಮಹಾಲಿಂಗಪೂರದ ಪುರಸಭೆ ಸದಸ್ಯೆಯಾದ ಚಾಂದನಿ ನಾಯಕ ಅವರ ಗರ್ಭಪಾತದ ಬಗ್ಗೆ ಅವರ ಪತಿ ನಾಗೇಶ ನಾಯಕ ಅವರು ಹಿಂದಿನ ಏಳು ವರ್ಷದ ಅವಧಿಯಲ್ಲಿ ಎರಡು ಮೂರು ಸಾರಿ ಗರ್ಭಪಾತವಾಗಿದೆ ಎಂದು ಪತ್ರಿಕಾ ಹೇಳಿಕೆಯನ್ನು ಲಿಖಿತ ರೂಪದಲ್ಲಿ ನೀಡಿರುತ್ತಾರೆ. ಈ ವಿಷಯಕ್ಕೆ ಶಾಸಕ ಸಿದ್ದು ಸವದಿಯವರಿಗೂ ಯಾವುದೇ ಸಂಭಂದವಿಲ್ಲವೆಂದು ಸಹ ಪತ್ರಿಕಾ ವರದಿಯನ್ನು ಲಿಖಿತ ರೂಪದಲ್ಲಿ ನೀಡಿರುತ್ತಾರೆ. ಸಾಮಾಜಿಕ ಜಾಲತಾನದಲ್ಲಿ ಕೂಡಾ ವಿಡಿಯೋ ಮುಖಾಂತರ ಹೇಳಿದ್ದಾರೆ. ಸುಳ್ಳನ್ನು ಹೇಗಾದರೂ ಮಾಡಿ ಸತ್ಯ ಮಾಡಬೇಕು ಎಂಬ ದುರುದ್ದೇಶದಿಂದ ಒಬ್ಬ ಸರಳ ಸಜ್ಜನಿಕೆಯ ನೇಕಾರ ಕಣ್ಮನಿ ರೈತ ನಾಯಕ ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿಯವರ ತೇಜೋವಧೆ ಮಾಡುವ ಉದ್ದೇಶದಿಂದ ಮಾಜಿ ಸಚಿವೆ ಉಮಾಶ್ರೀಯವರು ಇಂತಹ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ನಾಚಿಗೇಡಿನ ಸಂಗತಿ. ಈ ಪ್ರತಿಭಟನೆಯನ್ನು ನಾವು ಖಂಡಿಸುತ್ತೇವೆ. ಗರ್ಭಪಾತದ ವಿಷಯವಾಗಿ ಪ್ರತಿಭಟನೆಗೆ ಪರವಾಣಿಗೆ ನೀಡಬಾರದು. ಸುಳ್ಳನ್ನು ನೆಪ ಮಾಡಿಕೊಂಡು ಸತ್ಯ ಮಾಡಲು ಹೊರಟಿರುವ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಪರವಣಿಗೆ ನೀಡಿದ್ದಲ್ಲಿ ಮುಂದಿನ ದಿನಮಾನಗಳಲ್ಲಿ ಇವರ ಹತ್ತು ಪಟ್ಟು ಉಗ್ರ ಹೋರಾಟ ಮಾಡುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಹೊಸಮನಿ, ಸುರೇಶ ರೇಣಕೆ, ಶೀತಲ ಬೋಳಗೊಂಡ, ಶಂಕರ ಕುಂಬಾರ, ಸಂತೋಷ ಜಮಖಂಡಿ, ಕುಮಾರ ಸರಿಕರ, ಸದಾಶಿವ ಹೊಸಮನಿ, ವಿರಾಜ ಬಂಕಾಪೂರ, ಕಾಶೀನಾಥ ರಾಠೋಡ, ವಿನಾಯಕ ಬಂಕಾಪೂರ, ವಿಜಯ ಶಿರಗಾವಿ, ತಿಮ್ಮಣ್ಣ ಗಾಡಿವಡ್ಡರ, ಶ್ರೀಶೈಲ ತೆಳಗಿನಮನಿ ಸೇರಿದಂತೆ ಹಲವಾರು ಜನ ಕಾರ್ಯಕರ್ತರು ಇದ್ದರು.

Social Plugin