ರಬಕವಿ-ಬನಹಟ್ಟಿ ನಗರಸಭೆ ಎದುರು ಸತ್ಯಾಗ್ರಹ ನಡೆಸುತ್ತಿರುವ ವಸತಿ ನಿರ್ಮಾಣದ ಫಲಾನುಭವಿಗಳು.
ಫಲಾನುಭವಿಗಳಿಂದ ದಿಢೀರ್ ಸತ್ಯಾಗ್ರಹ
ರಬಕವಿ-ಬನಹಟ್ಟಿ,ಡಿ7: ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಡಿಯಲ್ಲಿನ ಫಲಾನುಭವಿಗಳಿಗೆ ಮನೆಗಳ ನಿರ್ಮಾಣಕ್ಕೆಂದು ಸಮರ್ಪಕವಾಗಿ ಯೋಜನೆಯಿಂದ ಹಣ ದೊರಕದ ಕಾರಣ ದಿಢೀರ್ ಸತ್ಯಾಗ್ರಹ ನಡೆಸುವಲ್ಲಿ ಕಾರಣವಾಯಿತು.
ರಬಕವಿ-ಬನಹಟ್ಟಿ ನಗರಸಭೆ ಮುಂಭಾಗದಲ್ಲಿ ಹಲವಾರು ಫಲಾನುಭವಿಗಳಿಂದ ಸೋಮವಾರದಿಂದ ನಡೆಯುತ್ತಿರುವ ಸತ್ಯಾಗ್ರಹದಲ್ಲಿ ನಗರಸಭಾ ಸದಸ್ಯ ಬಸವರಾಜ ಗುಡ್ಡೋಡಗಿ ಮಾತನಾಡಿ, ಕೇಂದ್ರದಿಂದ ದೊರಕಬೇಕಾದ ತಲಾ 1.5 ಲಕ್ಷ ರೂ.ಗಳಂತೆ ಒಟ್ಟು 239 ಫಲಾನುಭವಿಗಳ ಆಯ್ಕೆಗೆ ಸಂಬಂಧ 224 ಫಲಾನುಭವಿಗಳಿಗೆ ಹಣವೇ ಜಮೆಯಾಗಿಲ್ಲ. ಅದರಂತೆ ರಾಜ್ಯ ಸರ್ಕಾರದಿಂದ 84 ಕುಟುಂಬಗಳಿಗೆ ಈ ಯೋಜನೆ ದೊರಕಿಲ್ಲ.
ಹೀಗಿದ್ದಾಗ ಒಟ್ಟು 239 ಫಲಾನುಭವಿಗಳ ಪೈಕಿ 44 ಕುಟುಂಬಗಳು ಮನೆ ನಿರ್ಮಾಣವನ್ನು ಅರ್ಧಕ್ಕೆ ನಿಲ್ಲಿಸಿದ್ದು, ಕಳೆದ 2017-18 ರ ಯೋಜನೆಯಾಗಿದ್ದು, ಕಳೆದೆರಡು ವರ್ಷಗಳಿಂದ ಬಾಡಿಗೆ ಮನೆಯಲ್ಲಿಯೇ ವಾಸ ಮಾಡುತ್ತಿದ್ದರೆ, ಮನೆಗಳನ್ನು ನಿರ್ಮಿಸಿಕೊಂಡ ಕುಟುಂಬಗಳು ಖಾಸಗಿಯಾಗಿ ಹೆಚ್ಚಿನ ಬಡ್ಡಿ ಆಕರಣೆಯಲ್ಲಿ ಸಾಲ ಪಡೆದಿದ್ದಾರೆ. ಮೊದಲೇ ನೇಕಾರಿಕೆ ಸ್ಥಿತಿ ಅಧೋಗತಿಯತ್ತ ಸಾಗಿದ್ದು, ಮನೆ ನಿರ್ಮಿಸಿ ಸಾಲ ಮಾಡಿಕೊಂಡು ದುಡಿದ ಹಣವನ್ನೆಲ್ಲ ಸಾಲ ಹಾಗು ಬಡ್ಡಿಗಾಗಿಯೇ ತುಂಬುವಂತಾಗಿದ್ದು, ಹೊಟ್ಟೆಗೆ ಹಿಟ್ಟಿಲ್ಲದೆ ಬದುಕು ಅತಂತ್ರವಾಗಿದೆ ಎಂದರು.
ಕೂಡಲೇ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಫಲಾನುಭವಿಗಳಿಗೆ ದೊರಕಬೇಕಾದ ಹಣ ಬಿಡುಗಡೆಗೊಳಿಸುವವರೆಗೂ ಸತ್ಯಾಗ್ರಹ ಹಿಂಪಡೆಯುವದಿಲ್ಲವೆಂದು ಗುಡ್ಡೋಡಗಿ ಸ್ಪಷ್ಟನೆ ನೀಡಿದ್ದಾರೆ.
Social Plugin