ಆದಿಬಣಜಿಗ ಸಮಾಜವನ್ನು ಪ್ರವರ್ಗ-2ಎ ಸೇರ್ಪಡೆಗೆ ಒತ್ತಾಯ

ರಬಕವಿ-ಬನಹಟ್ಟಿ,ಡಿ7: ಶೈಕ್ಷಣಿಕ, ಸಾಮಾಜಿಕ ಹಾಗು ಆರ್ಥಿಕವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿರುವ ಆದಿಬಣಜಿಗವನ್ನು ಪ್ರವರ್ಗ-2ಎಗೆ ಸೇರಿಸಬೇಕೆಂದು ಸಮಾಜದ ಅಧ್ಯಕ್ಷ ಶಿವು ಗುಂಡಿ ಹಾಗು ರಾಜ್ಯಾಧ್ಯಕ್ಷ ಸದಾಶಿವ ಕಾರಡಗಿ ನೇತೃತ್ವದಲ್ಲಿ ಮನವಿ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು.

ತೇರದಾಳ ಶಾಸಕ ಸಿದ್ದು ಸವದಿಯವರಿಗೆ ಮನವಿ ಅರ್ಪಿಸಿ ಮಾತನಾಡಿದ ಅವರು, ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಮಾಡಲಾಗಿದ್ದು, ಭರವಸೆಯನ್ನು ಮಾತ್ರ ನೀಡುತ್ತಿದೆ. ಈ ಬಾರಿ ಯಾವದೇ ಸಬೂಬು ಹೇಳದೆ ನಿಜವಾಗಿಯೂ ಅರ್ಹತೆ ಹೊಂದಿರುವ ಆದಿಬಣಜಿಗ ಸಮಾಜವನ್ನು ಪ್ರವರ್ಗ 2ಎ ಗೆ ಸೇರ್ಪಡೆಗೊಳಿಸಬೇಕೆಂದು ಒತ್ತಾಯಿಸಿದರು.

ಇದೇ ಸಂದರ್ಭ ಮಹಾಂತೇಶ ಯಾದವಾಡ, ರಾಜು ಗುಂಡಿ, ಶಂಕರ ಕೆಸರಗೊಪ್ಪ, ಶ್ರೀಶೈಲ ಕೆಸರಗೊಪ್ಪ, ಸುನೀಲ ಗುಂಡಿ, ಯಮನಪ್ಪ ಅಂತ್ರಿ, ಜಯವಂತ ಗುಂಡಿ, ಶಂಕರ ಮಾಳಿ, ವಿಠ್ಠಲ ಹಟ್ಟಿ, ಶೇಖರ ಮಾಲಗಾರ, ಲಕ್ಷ್ಮಣ ಗುಂಡಿ, ವೈಭವ ಯಾದವಾಡ, ಸುಭಾಷ ಚೋಳಿ, ವೆಂಕಣ್ಣ ಚಿಂಚಲಿ, ಸುರೇಶ ಗಾಡದ, ಸತ್ಯಪ್ಪ ಕೊಣ್ಣೂರ, ಭೀಮುಕಾಕಾ ಉಳ್ಳಾಗಡ್ಡಿ ಸೇರಿದಂತೆ ರಬಕವಿ-ಬನಹಟ್ಟಿ ತಾಲೂಕಿನ ಅನೇಕ ಗ್ರಾಮಗಳಿಂದ ಜನರು ಆಗಮಿಸಿದ್ದರು.