ಬನಹಟ್ಟಿಯ ಕೆಎಚ್‍ಡಿಸಿ ಯೋಜನಾಧಿಕಾರಿ ಆರ್.ಎಸ್. ರಾಜನ್ ಅವರಿಗೆ ನೇಕಾರರು ಮನವಿ ಅರ್ಪಿಸಿದರು.

ಮಜೂರಿ ಹಾಗು ಪ್ರೋತ್ಸಾಹ ಧನಕ್ಕಾಗಿ ನೇಕಾರರ ಕೂಗು

ರಬಕವಿ-ಬನಹಟ್ಟಿ,ಡಿ7: ಕಳೆದ ನಾಲ್ಕು ವರ್ಷಗಳಿಂದ ಕೆಎಚ್‍ಡಿಸಿ ನಿಗಮದಡಿಯಲ್ಲಿ ದುಡಿಯುತ್ತಿರುವ ನೇಕಾರರಿಗೆ ಮಜೂರಿ ಹೆಚ್ಚಳಗೊಳಿಸಿಲ್ಲ. ಅಲ್ಲದೆ ಪ್ರೋತ್ಸಾಹ ಧನ ಗಗನಕುಸುಮವಾಗಿದ್ದು, ಸರ್ಕಾರ ಕೂಡಲೇ ನೇಕಾರರಿಗೆ ಸೌಲಭ್ಯ ಒದಗಿಸಬೇಕೆಂದು ಕೆಎಚ್‍ಡಿಸಿ ಕಚೇರಿಗೆ ಮೊರೆ ಹೋಗಿ ಮನವಿ ಅರ್ಪಿಸಿದರು.

ನೇಕಾರ ಮುಖಂಡ ರಾಜು ಹೂಗಾರ ಮಾತನಾಡಿ, ತೀವ್ರ ಸಂಕಷ್ಟದಲ್ಲಿ ಕುಟುಂಬ ನಿರ್ವಹಣೆ ನಮ್ಮದಾಗಿದೆ. ಸಮರ್ಪಕ ಉದ್ಯೋಗವಿಲ್ಲದೆ, ಸದ್ಯದ ಮಾರುಕಟ್ಟೆಯಲ್ಲಿ ಬದುಕು ಸಾಗಿಸಲು ಸಾಧ್ಯವಾಗುತ್ತಿಲ್ಲ. ಪ್ರತಿ ದಿನ ಕೇವಲ 100 ರಿಂದ 120 ರೂ.ಗಳಷ್ಟು ಮಾತ್ರ ವೇತನ ದೊರಕುತ್ತಿದ್ದು, ಕುಟುಂಬ ನಿಭಾಯಿಸುವದು ಕಷ್ಟಕರವಾಗಿದೆ. ಸರ್ಕಾರ ಕೂಡಲೇ ಮಜೂರಿ ಹೆಚ್ಚಳಗೊಳಿಸುವದಲ್ಲದೆ ಪ್ರೋತ್ಸಾಹ ಧನವನ್ನು ಚಾಲ್ತಿಯಲ್ಲಿಟ್ಟು ಪ್ರತಿ ವರ್ಷ ನಿಯಮಿತ ಸಮಯದಲ್ಲಿ ಒದಗಿಸಬೇಕೆಂದರು.

ನಗರದ ಕೆಎಚ್‍ಡಿಸಿ ಪ್ರಧಾನ ಕಚೇರಿ ಯೋಜನಾಧಿಕಾರಿ ಆರ್.ಎಸ್. ರಾಜನ್ ಅವರಿಗೆ ಮನವಿ ಅರ್ಪಿಸಿದರು. ನೇಕಾರ ಮುಖಂಡರಾದ ಸಿದ್ದಪ್ಪ ಗಂವಾರ, ನಾಮದೇವ ಗೋಂದಕರ, ಗುರುಬಸು ಶೀಲವಂತ, ಲಕ್ಷ್ಮಣ ಮುಂಡಾಸ, ಯೂಸಪ್ ಅವರೆ, ಸುರೇಶ ರಾಠಿ, ರುದ್ರೇಶ ಶೆಟ್ಟೆಪ್ಪನವರ ಸೇರಿದಂತೆ ಅನೇಕರಿದ್ದರು.