ಕನಕದಾಸರ ಕೊಡುಗೆ ಅಪಾರ
ರಬಕವಿ-ಬನಹಟ್ಟಿ,ಡಿ3: ನುಡಿದಂತೆ ನಡೆದು ಮಾನವತಾವಾದಿಗೆ ಪ್ರೇರಣೆಯಾದ ಕನಕದಾಸರು ಜಗತ್ತಿಗೆ ಸಮಾನತೆ ಕಲ್ಪಿಸುವದರ ಮೂಲಕ ಜಗತ್ತು ಕಂಡ ಅಪರೂಪದ ವ್ಯಕ್ತಿಯಾಗಿ ರೂಪವಾಗಿ ಇಂದಿಗೂ ಅವರ ಸ್ಮರಣೆ ಚಿರವಾಗಿದೆ ಎಂದು ಭಾರತಿ ತಾಳಿಕೋಟಿ ತಿಳಿಸಿದರು.
ಹೊಸೂರು-ರಬಕವಿಯ ಪದ್ಮಾವತಿ ಇಂಟರ್‍ನ್ಯಾಷನಲ್ ಶಾಲೆ ಆವರಣದಲ್ಲಿ ಕನಕದಾಸರ ಜಯಂತಿ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶರಣರ ಬದುಕು ಹಸನಾಗಿತ್ತು. ಎಂದಿಗೂ ಕೋಪ, ತಾಪಗೊಳ್ಳದೆ ಶಾಂತ ಹಾಗು ಮುಗ್ಧತೆಯಿಂದ ಬದುಕು ಸಾಗಿಸಿ ಬದುಕುವ ಕಲೆಗಳನ್ನು ಕರಗತ ಮಾಡಿಕೊಂಡವರಾಗಿದ್ದರು. ಅವರ ಮಾರ್ಗದರ್ಶನದಲ್ಲಿ ಬದುಕಿದರೆ ಬದುಕು ಹಸನಾಗುವದು ಎಂದರು.
ಪ್ರಾಂಶುಪಾಲರಾದ ಬಸವರಾಜಕಲಾದಗಿ ಮತ್ತು ಪ್ರಾಚಾರ್ಯರಾದ ಶ್ರೀಶೈಲ ಕುಂಬಾರ ಸೇರಿದಂತೆ ಅನೇಕರಿದ್ದರು.

Social Plugin