ಜಯಂತಿಗೆ ಸೀಮಿತವಾಗದಿರಲಿ ಕನಕದಾಸರ ನೆನಪು
ರಬಕವಿ-ಬನಹಟ್ಟಿ,ಡಿ3: ದಾಸರೆಂದರೆ ದಾಸರು, ಮಹಾಕವಿ ಎಂದರೆ ಮಹಾಕವಿ ಇವರು ಕನಕದಾಸರು. ಕನ್ನಡ ಸಾಹಿತ್ಯದಲ್ಲಿ ಮುಂಡಿಗೆ(ಒಗಟು0 ಎಂಬ ವಿಶಿಷ್ಠ ಪ್ರಕಾರವನ್ನು ಜನಪ್ರಿಗೊಳಿಸಿದ ಕನಕದಾಸರು ಭತ್ತ-ರಾಗಿಯ ಸಂವಾದ ರೂಪದಲ್ಲಿ ಷಟ್ಪದಿ ಕಾವ್ಯವೊಂದನ್ನು ಬರೆದು, ಜಾತಿ ಸಂವಾದಕ್ಕೆ ಬಹು ಹಿಂದೆಯೇ ಚಾಲನೆ ಕೊಟ್ಟಿದ್ದರು. ಇವರ ಬಹುತೇಕ ಕೀರ್ತನೆಗಳು ಆಧ್ಯಾತ್ಮದ ನೆಲಗಟ್ಟಿನಲ್ಲಿ ಸಾಮಾಜಿಕ ನಡುವಳಿಕೆಗಳನ್ನು ವಿಮರ್ಶೆ ಮಾಡಿರುವದು ವಿಶೇಷವೆಂದು ಬಿ.ಕೆ. ಜಾನಕ್ಕಿ ಹೇಳಿದರು.
ನಗರದ ಕನಕದಾಸರ ವೃತ್ತದಲ್ಲಿ ಶ್ರೀ ಭಕ್ತ ಕನಕದಾಸರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಕನಕದಾಸರು ಅಪ್ರತಿಮ ದಾಸರು ಇವರು ದೇಶಕ್ಕೆ ಮಾದರಿ ಮಾನವತಾವಾದಿ ಕನಕದಾಸರು ದಾಸರಲ್ಲಿ ದಾಸರು ಮಹಾತಪಸ್ವಿಗಳೆಂದರು.
ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ, ಮಾಳು ದುರ್ಗನ್ನವರ, ಅರ್ಜುನ್ ಜಿಡ್ಡಿಮನಿ, ಬೀರಪ್ಪ ಸಂಗೋಳ್ಳಿ, ದೇವಪ್ಪ ಮಹಿಶವಾಡಗಿ, ಜಕ್ಕಪ್ಪ ಜಿಡ್ಡಿಮನಿ, ನಾಗಪ್ಪ ಬಂಗೆನ್ನವರ, ಪ್ರೇಮ ಚಿತ್ತರಗಿ, ದೇವೇಂದ್ರ ಅಸ್ಕಿ, ಕರೆಪ್ಪ ಗಡದಿ, ಭೀಮಪ್ಪ ಭುಜಂಗ, ವಿಠ್ಠಲ್ ಮಹಿಷವಾಡಗಿ, ದುಂಡಪ್ಪ ಕುಡಚಿ ಸೇರಿದಂತೆ ಅನೇಕರಿದ್ದರು.

Social Plugin