ರಬಕವಿ-ಬನಹಟ್ಟಿ ತಾಲ್ಲೂಕಾ ತಹಸೀಲ್ದಾರ ಕಾರ್ಯಾಲಯದಲ್ಲಿ ಶ್ರೀ ಭಕ್ತ ಕನಕದಾಸರ ಜಯಂತಿ ನಿಮಿತ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಗ್ರೇಡ್2 ತಹಶೀಲ್ದಾರ್ ಎಸ್. ಬಿ. ಕಾಂಬಳೆ
ಕನಕರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ
ರಬಕವಿ-ಬನಹಟ್ಟಿ,ಡಿ3: ವ್ಯಾಸರಾಯರ ಮೆಚ್ಚಿನ ಶಿಷ್ಯರಾಗಿರುವ ಭಕ್ತ ಕನಕದಾಸರ ತತ್ವ-ಆದರ್ಶಗಳನ್ನು ಪ್ರತಿಯೊಬ್ಬ ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಗ್ರೇಡ್2 ತಹಶೀಲ್ದಾರ್ ಎಸ್. ಬಿ. ಕಾಂಬಳೆ ಹೇಳಿದರು.
ಅವರು ರಬಕವಿ-ಬನಹಟ್ಟಿ ತಹಸೀಲ್ದಾರ ಕಾರ್ಯಾಲಯದಲ್ಲಿ ಶ್ರೀ ಭಕ್ತ ಕನಕದಾಸರ ಜಯಂತಿ ನಿಮಿತ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಕನಕರ ಪೂರ್ವ ಹೆಸರು ತಿಮ್ಮಪ್ಪ, ಅವರು 16ನೇ ಶತಮಾನದ ಕಾಲಘಟ್ಟದಲ್ಲಿ ಜನಪ್ರಿಯರಾದ ಭಕ್ತಿಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಉಪತಹಶೀಲ್ದಾರ ಬಸವರಾಜ ಬಿಜ್ಜರಗಿ, ಅಧಿಕಾರಿ ಬಸವರಾಜ ತಾಳಿಕೋಟಿ, ಪ್ರಕಾಶ ವಂದಾಲ, ಸಮಾಜದ ಮುಖಂಡರಾದ ಶಿವಲಿಂಗ ಸನದಿ, ಮಾಳು ಹಿಪ್ಪರಗಿ, ಪಿ.ಜಿ. ಕಾಖಂಡಕಿ, ಪ್ರಭು ಪೂಜಾರಿ, ಅಶೋಕ ಹಳ್ಳೂರ, ರವಿ ಕೊರ್ತಿ, ಪಾಂಡು ಹಿಪ್ಪರಗಿ, ಮಲ್ಲೇಶ ತುಂಗಳ, ಭರಮು ತುಂಗಳ, ಮಲ್ಲಿಕಾರ್ಜುನ ವಂದಾಲ, ಮಾಳು ಕರಿಗಾರ, ಮಹಾದೇವ ಆಲಕನೂರ, ಸಿದ್ದಪ್ಪ ಭುಜಿಂಗ, ಕರೆಪ್ಪ ಭುಜಿಂಗ ಸೇರಿದಂತೆ ಅನೇಕರು ಇದ್ದರು.
ಅನೇಕರು ಇದ್ದರು.

Social Plugin