ಜನಸಾಮಾನ್ಯರ ಏಳ್ಗೆಗೆ ಸಹಕಾರಿ ಕ್ಷೇತ್ರ ಶ್ರಮಿಸಲಿ
ರಬಕವಿ-ಬನಹಟ್ಟಿ,ಡಿ3: ಸಂಕಷ್ಟದಲ್ಲಿರುವ ಕಟ್ಟಕಡೆಯ ಶ್ರಮಿಕ ವ್ಯಕ್ತಿಯ ಸಬಲೀಕರಣಕ್ಕೆ ಸಹಕಾರಿ ಕ್ಷೇತ್ರವು ಪ್ರಾಮಾಣಿಕ ಪ್ರಯತ್ನ ಮಾಡಿದ್ದಲ್ಲಿ ಬಡತನವೆಂಬ ಭೂತವನ್ನು ಸಮಾಜದಿಂದ ಅಳಿಸಿ ಸದೃಢ ಸಮಾಜವನ್ನು ನಿರ್ಮಿಸಲು ಸಾಧ್ಯವೆಂದು ಶ್ರೀನಿಧಿ ಸಹಕಾರಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ನಾಶಿ ಹೇಳಿದರು.
ರಬಕವಿಯ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ನಡೆದ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜನರ ಏಳ್ಗೆಗೆ ಸದಾ ಹಾತೊರೆಯುವ ಸಂಘಗಳಾಗಬೇಕು. ಸಂಘದ ಅಭಿವೃದ್ಧಿಯ ಜೊತೆಗೆ ಸಮಾಜವನ್ನೂ ಅಭಿವೃದ್ಧಿಗೊಳಿಸುವ ಮೂಲಕ ಜನರ ಆರ್ಥಿಕ ಸಬಲೀಕರಣಕ್ಕೆ ಮುಂದಾಗಬೇಕಾಗಿರುವದು ಸಹಕಾರಿ ಕ್ಷೇತ್ರದ ಮೊದಲ ಆದ್ಯತೆಯಾಗಿದೆ ಎಂದು ನಾಶಿ ತಿಳಿಸಿದರು.
ಈಶ್ವರ ಬೀಳಗಿ ಅಧ್ಯಕ್ಷತೆ ವಹಿಸಿದ್ದರು. ಪ್ರಸಕ್ತ ವರ್ಷ ಸಂಘವು 91 ಲಕ್ಷ ರೂ.ಗಳಷ್ಟು ದಾಖಲೆ ಲಾಭ ಗಳಿಸುವ ಮೂಲಕ ಗಮನ ಸೆಳೆಯಿತು. ವೇದಿಕೆ ಮೇಲೆ ಮಲ್ಲಿಕಾರ್ಜುನ ಸಾಬೋಜಿ, ನೀಲಕಂಠ ಮುತ್ತೂರ, ಶ್ರೀಶೈಲ ಭೂಯ್ಯಾರ, ಬಸವರಾಜ ತೆಗ್ಗಿ, ಸಂಗಯ್ಯ ಅಮ್ಮಣಗಿಮಠ, ಉದಯ ಜಿಗಜಿನ್ನಿ, ಗಂಗಾಧರ ಭಿಲವಡಿ, ಅನಿಲ ಮಹಾಜನ, ಗಂಗಾ ಕಮತಗಿ, ಮಹಾದೇವಿ ಹುಲಗಬಾಳಿ, ಅಂದಾನಿ ಮುತ್ತೂರ, ರವಿ ಮುತ್ತೂರ, ವಿಜಯಕುಮಾರ ನಾಶಿ ಉಪಸ್ಥಿತರಿದ್ದರು.
ಎಂ.ಬಿ. ಸಾಬೋಜಿ ಸ್ವಾಗತಿಸಿದರು. ರವೀಂದ್ರ ಅಷ್ಟಗಿ ನಿರೂಪಿಸಿದರು. ಸಂಗಯ್ಯ ಅಮ್ಮಣಗಿ ವಂದಿಸಿದರು.

Social Plugin