ವೀರಶೈವ-ಲಿಂಗಾಯ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸ್ವಾಗತ
ರಬಕವಿ-ಬನಹಟ್ಟಿ,ನ18:ವೀರಶೈವ-ಲಿಂಗಾಯತ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು ಗಣನೀಯ ಸಂಖ್ಯೆಯಲ್ಲಿದ್ದು, ರಾಜ್ಯದಲ್ಲಿ ವೀರಶೈವ-ಲಿಂಗಯ ಸಮುದಾವು ಅತಿದೊಡ್ಡ ಪ್ರಮಾಣದಲ್ಲಿ ಇರುವದರಿಂದ ಈ ಸಮುದಾಯಕ್ಕೆ ಅಭಿವೃದ್ಧಿ ನಿಗಮ ರಚನೆ ಮಾಡಬೇಕೆಂಬ ಎರಡು ದಶಕಗಳ ಬೇಡಿಕೆಗೆ ಸ್ಪಂದಿಸಿದ ರಾಜ್ಯ ಸರ್ಕಾರವು ಹೆಚ್ಚಿನ ಮುತುವರ್ಜಿ ವಹಿಸಿ, ಕರ್ನಾಟಕ ವೀರಶೈವ-ಲಿಂಗಯಕ ಅಭಿವೃದ್ಧಿ ನಿಗಮ ರಚನೆ ಮಾಡುವದರ ಮೂಲಕ ಐತಿಹಾಸಿಕ ನಿರ್ಧಾರ ತೆಗೆದುಕೊಂಡ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರ ಕ್ರಮ ಸ್ವಾಗತಾರ್ಹ ಮತ್ತು ಅಭಿನಂದನಾರ್ಹವಾಗಿದೆ ಎಂದು ತೇರದಾಳ ಕ್ಷೇತ್ರದ ಬಿಜೆಪಿ ಮುಖಂಡರಾದ ಲಕ್ಕಪ್ಪ ಪಾಟೀಲ, ಸುರೇಶ ಅಕ್ಕಿವಾಟ ಹೇಳಿದರು.
ಈ ನಿಗಮದ ಸ್ಥಾಪನೆಯಿಂದ ಹೆಚ್ಚಿನ ಅನುದಾನ ಬಿಡುಗಡೆಯಾಗಲಿದ್ದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರಿಯಾಗಲಿದೆ.
ಇದೇ ಸಂದರ್ಭ ರಾಜು ಅಂಬಲಿ, ಆನಂದ ಕಂಪು, ನಗರಸಭಾಧ್ಯಕ್ಷ ಶ್ರೀಶೈಲ ಬೀಳಗಿ, ಸಂಜಯ ತೆಗ್ಗಿ, ರಮೇಶ ಮಂಡಿ ಸೇರಿದಂತೆ ಅನೇಕರಿದ್ದರು.
ಮರಾಠಾ ಅಭಿವೃದ್ಧಿ ಪ್ರಾಧಿಕಾರಕ್ಕೆ ಕದಂ ಸ್ವಾಗತ: ರಾಜ್ಯದಲ್ಲಿ ಮರಾಠಾ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಮರಾಠಾ ಸಮಾಜದ ಅಧ್ಯಕ್ಷ ಕುಮಾರ ಕದಂ ಸ್ವಾಗತಿಸಿದ್ದಾರೆ. ಮಾರಾಠಾ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಈ ಹಿಂದೆ ರಾಜ್ಯಾದ್ಯಂತ ಏಕ್ ಮರಾಠ ಲಾಕ್ ಮರಾಠ ಹೋರಾಟ ನಡೆಸಲಾಗಿತ್ತು.
ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮರಾಠಾ ಸಮುದಾಯಕ್ಕೆ ಆರ್ಥಿಕ, ಸಾಮಾಜಿಕ, ಶೈಕ್ಷನಿಕ ಹಾಗು ಅಭಿವೃದ್ಧಿಗಾಗಿ 50 ಕೋಟಿ ಅನುದಾನ ನೀಡುವ ಮೂಲಕ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದಕ್ಕೆ ಧನ್ಯವಾದ ತಿಳಿಸಿದರು.
ಶಿವಾನಂದ ಗಾಯಕವಾಡ, ಮುತ್ತಪ್ಪ ಸಿಂಧೆ, ವಿಜಯ ಮಾನೆ, ಬಾಳು ಕದಮ, ಬಾಬು ಪುಂಡೆ, ಶ್ರೀಧರ ಸಾಳುಂಕೆ, ಸಂಜಯ ಸಿಂಧೆ, ಶ್ರೀಕಾಂತ ಗಾಯಕವಾಡ, ಜಯಶ್ರೀ ಜಗತಾಪ, ಅನಿತಾ ಕದಮ, ಶೃತಿ ಪವಾರ, ಇಂಧುಮತಿ ಸಾಲಗುಡೆ ಸೇರಿದಂತೆ ಅನೇಕರಿದ್ದರು.

Social Plugin