ಚರಂಡಿ ತ್ಯಾಜ್ಯ ತೆರವುಗೊಳಿಸಿ
ರಬಕವಿ-ಬನಹಟ್ಟಿ,ನ18: ಸ್ಥಳೀಯ ಕಾಡಸಿದ್ಧೇಶ್ವರ ಮತ್ತು ಬಾಲಾಜಿ ದೇವಸ್ಥಾನದ ಮುಂಭಾದಲ್ಲಿಯ ಒಳ ಚರಂಡಿ ಅಭಿವೃದ್ಧಿ ಸಂದರ್ಭದಲ್ಲಿ ಅಲ್ಲಿಯ ಅಪಾರ ಪ್ರಮಾಣದ ತ್ಯಾಜ್ಯವನ್ನು ರಸ್ತೆಯ ಮೇಲೆ ಹಾಕಿ ಹೋಗಿರುವುದರಿಂದ ಸಾರ್ವಜನಿಕರಿಗೆ ಮತ್ತು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಬಹಳಷ್ಟು ತೊಂದರೆಯಾಗಿದೆ.
ಬೃಹತ್ ಗುಡ್ಡೆಯಾಕಾರದಲ್ಲಿ ಈ ತ್ಯಾಜ್ಯವನ್ನು ಮರಳಿ ಚರಂಡಿಯ ಸುತ್ತ ಮುತ್ತಲಿನ ತೆಗ್ಗು ಪ್ರದೇಶಕ್ಕೆ ಹಾಕಬೇಕು ಇಲ್ಲವೆ ಅದನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕಾಗಿದೆ. ಈ ತ್ಯಾಜ್ಯವು ಸಂಪೂರ್ಣವಾಗಿ ಒಣಗಿದೆ. ಇದರಿಂದಾಗಿ ಸುತ್ತ ಮುತ್ತಲಿನ ಪ್ರದೇಶಗಳಿಗೆ ಈ ತ್ಯಾಜ್ಯದ ಧೂಳು ಹೋಗುತ್ತಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ನೀಡಿ ಆದಷ್ಟು ಬೇಗನೆ ಇಲ್ಲಿಯ ತ್ಯಾಜ್ಯವನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Social Plugin