ತೇರದಾಳ ಪಟ್ಟಣದ ಐತಿಹಾಸಿಕ ದೇಸಾರ ಭಾವಿಯ ಸುತ್ತಮುತ್ತಲೂ ಸ್ವಚ್ಚ ಮಾಡಿದ ಸಾರ್ವಜನಿಕರು ಹಾಗೂ ಪೌರಕಾರ್ಮಿಕರು....
ದೀಪಾವಳಿ ಕಡೇ ಪಾಡ್ಯ ನಿಮಿತ್ಯ ನಾಳೆ  ದೇಸಾರ ಭಾವಿಯಲ್ಲಿ ಅಭಿಷೇಕ ಬಾಗೀನ ಅರ್ಪಣೆ ಹಾಗೂ ತೆಪ್ಪೋತ್ಸವ
ಐತಿಹಾಸಿಕ ದೇಸಾರ ಭಾವಿ ಸುತ್ತಲೂ ಸ್ವಚ್ಚತಾ ಕಾರ್ಯ
ತೇರದಾಳ : ದೀಪಾವಳಿ ಕಡೇ ಪಾಡ್ಯ ನಿಮಿತ್ಯ ದೇಸಾರ ಭಾವಿಯಲ್ಲಿ ಬಾಗೀನ ಅರ್ಪಣೆ ಹಾಗೂ ತೆಪ್ಪೋತ್ಸವ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.
   ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ದೀಪಾವಳಿಯ ಕಡೇ ಪಾಡ್ಯ ನಿಮಿತ್ಯ ಶ್ರೀಅಲ್ಲಮಪ್ರಭು ದೇವಸ್ಥಾನದಲ್ಲಿ ಹಾಗೂ ಐತಿಹಾಸಿಕ ದೇಸಾರ ಭಾವಿಯ ಹತ್ತಿರ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ನ.20 ರಂದು ಬೆಳಿಗ್ಗೆ ಶ್ರೀ ಪ್ರಭುದೇವರ ಪಾಲಕಿ ಉತ್ಸವ, ಸಾಯಂಕಾಲ ದೇಸಾರ ಭಾವಿಯಲ್ಲಿ ಅಭಿಷೇಕ, ಬಾಗೀನ ಅರ್ಪಣೆ ಹಾಗೂ ಗಂಗಾ ಆರತಿ ಕಾರ್ಯಕ್ರಮ ನಡೆಯುವವು. ಈ ವರ್ಷ ವಿಷೇಶವೆಂದರೆ ದೇಸಾರ ಭಾವಿಯಲ್ಲಿ ತೆಪ್ಪೋತ್ಸವ ಜರುಗುವುದು. ತೆಪ್ಪದಲ್ಲಿ ಶ್ರೀ ಅಲ್ಲಮಪ್ರಭು ದೇವರ ಮೂರ್ತಿಯನ್ನು ಇಡಲಾಗುವುದು ಎಂದು ಸಂಘಟಕರು ತಿಳಿಸಿದರು. ಆ ನಿಮಿತ್ಯವಾಗಿ ಇಂದು ದೇಸಾರ ಭಾವಿಯ ಸುತ್ತಲೂ ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಬಾಳಿಕಾಯಿ, ರೇವಣೇಶ ಹಿರೇಮಠ ಸೇರಿದಂತೆ ಇನ್ನಿತರರು ಸ್ವಚ್ಚತಾ ಕಾರ್ಯವನ್ನು ಮಾಡಿದರು. 
    ಪ್ರತಿವರ್ಷದಂತೆ ಈ ವರ್ಷವೂ ಬೆಳಿಗ್ಗೆಯಿಂದ ಶ್ರೀಅಲ್ಲಮಪ್ರಭು ದೇವರ ಪಾಲಕಿ ಉತ್ಸವ ಹಾಗೂ ನಂದಿಕೋಲು ಉತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯುವುದು. ಹಾಗೂ ದೇಸಾರ ಭಾವಿಗೆ ಬಂದು ಸಾಯಂಕಾಲ ದೇಸಾರ ಭಾವಿಯ ಕಟ್ಟೆಯ ಮೇಲೆ ಶ್ರೀ ಅಲ್ಲಮಪ್ರಭು ದೇವರು ವಿರಾಜಮಾನರಾಗುವರು. ನಂತರ ಭಾವಿಯಲ್ಲಿ ಅಭಿಷೇಕ ಕಾರ್ಯಕ್ರಮ ಜರುಗುವುದು. ನಂತರ ಈ ಎಲ್ಲ ಕಾರ್ಯಕ್ರಮಗಳು ಜರುಗುವವು ಎಂದು ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಬಾವಿಯನ್ನು ರಂಗೋಲಿ ಹಾಗೂ ದೀಪಗಳಿಂದ, ವಿದ್ಯುತ್ ದೀಪಗಳಿಂದ ಸಿಂಗರಿಸಲಾಗುವುದು. ಜನರಿಂದ ಗದ್ದಲವಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಶಿಸ್ತು ಬದ್ಧವಾಗಿ ಸಾಲಾಗಿ ಸಾರ್ವಜನಿಕರು ದರ್ಶನಾಶೀರ್ವಾದ ಪಡೆಯಲು ಎಲ್ಲ ವ್ಯವಸ್ಥೆಯನ್ನು ಮಾಡಲಾಗುವುದು. 
   ಕಲ್ಲಪ್ಪ ಕಬಾಡಗಿ, ಶಂಬು ಮಾಸ್ತಿ ಹಾಗೂ ಪೌರಾಕಾರ್ಮಿಕರು ಸೇರಿದಂತೆ ಸಾರ್ವಜನಿಕರಿದ್ದರು. ಈ ಮಹತ್ವವಾದ ಕಾರ್ಯಕ್ರಮಕ್ಕೆ ಸಿದ್ಧತೆ ಗೊಳ್ಳುತ್ತಿರುವ ಐತಿಹಾಸಿಕ ದೇಸಾರ ಬಾವಿ ಹತ್ತಿರ ಇಷ್ಟೆಲ್ಲ ತಯಾರಿ ನಡೆಯುತ್ತಿದ್ದರು ಪುರಸಭೆಯ ಯಾವ ಅಧಿಕಾರಿಗಳು ಬಾರದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.