ನೇಕಾರರ ಅಭವೃದ್ಧಿಗೆ ಸಹಕಾರಿ ರಂಗ ಶ್ರಮಿಸಲಿ
*ಮಹಿಳೆಯರಿಗೋಸ್ಕರ ಭದ್ರತೆಯಿಲ್ಲದ ಸಾಲ ನೀಡುತ್ತಿರುವದು ವಿಶೇಷ
ರಬಕವಿ-ಬನಹಟ್ಟಿ,ನ29:ನೇಕಾರ ಸಮುದಾಯವು ದಿನದಿಂದ ದಿನಕ್ಕೆ ಅಧೋಗತಿಯತ್ತ ಸಾಗುತ್ತಿದ್ದು, ಇವರ ಅಭಿವೃದ್ಧಿಗೆ ಸಹಕಾರಿ ರಂಗವು ಶ್ರಮಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಸುರೇಶ ಚಿಂಡಕ ಹೇಳಿದರು.
ರವಿವಾರ ನಗರದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಭುವನೇಶ್ವರಿ ವಿದ್ಯುತ್ ಮಗ್ಗಗಳ ಸಹಕಾರಿ ಸಂಘದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನೇಕಾರಿಕೆಯನ್ನೇ ಅವಲಂಬಿಸಿರುವ ರಬಕವಿ-ಬನಹಟ್ಟಿ ತಾಲೂಕಿನ ಜನತೆಗೆ ಹೊಸ ರೂಪದೊಂದಿಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧೆಗಿಳಿಯುವ ಅನಿವಾರ್ಯತೆಯಿದೆ. ಇದಕ್ಕೆ ಪೂರಕವಾಗಿ ಸಹಕಾರಿ ಸಂಘಗಳು ನೇಕಾರರಿಗೆ ಸ್ಪಂದಿಸುವ ಅಗತ್ಯವಿದೆ ಎಂದರು.
ಬಡವರಿಂದ ಕೂಡಿದ ಸಹಕಾರಿ ಸಂಘ ಇದಾಗಿದೆ. ಯಾವದೇ ಭದ್ರತೆಯಿಲ್ಲದೆ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಹಾಗು ನೇಕಾರಿಕೆ ಸಹಾಯಕ್ಕೆ 50 ಸಾವಿರ ರೂ.ಗಳನ್ನು ಈಗಾಗಲೇ ಒದಗಿಸುತ್ತಿದ್ದು, ಸಭೆಯಲ್ಲಿ 1 ಲಕ್ಷ ರೂ.ವರೆಗೆ ನೀಡುವಲ್ಲಿ ಠರಾವು ಒಪ್ಪಿಗೆ ಮಾಡಲಾಯಿತು.
ಇದೇ ಸಂದರ್ಭ ನಿವೃತ್ತರಾದ ಯೋಧ ಪ್ರವೀಣಕುಮಾರ ಆಲಗೂರ ಹಾಗು ಇದೀಗ ಭಾರತೀಯ ಸೇನಾ ಲೆಫ್ಟಿನೆಂಟ್ ಆಗಿ ಆಯ್ಕೆಗೊಂಡ ಸಸಾಲಟ್ಟಿ ಗ್ರಾಮದ ವಿನೋದ ಕಾಪಶಿ ಅವರನ್ನು ಸನ್ಮಾನಿಸಲಾಯಿತು.
ವೇದಿಕೆ ಮೇಲೆ ಉಪಾಧ್ಯಕ್ಷೆ ಲಕ್ಷ್ಮೀ ಶಿರಗುಪ್ಪಿ, ವಿಶ್ವನಾಥ ಹುಲಗಬಾಳಿ, ವಿಜಯ ಪಟ್ಟಣ, ಚಿದಾನಂದ ಸಜ್ಜನ, ಕಾಡಪ್ಪ ಧಬಾಡಿ, ಪದ್ಮಾವತಿ ಶೀಲವಂತ, ಗುಡಮಾ ಡಾಂಗೆ, ಶ್ರೀದೇವಿ ಹಾರುಗೇರಿ, ಭಾರತಿ ನುಚ್ಚಿ, ಮಹಾದೇವ ಬಟಕಟ ಉಪಸ್ಥಿತರಿದ್ದರು.

Social Plugin