ಬನಹಟ್ಟಿಯಲ್ಲಿ ಶ್ರೀ ಕಾಡಸಿದ್ಧೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್‍ನ ಮಹಾಸಭೆಯನ್ನು ಅಧ್ಯಕ್ಷ ಶಂಕರ ಜುಂಜಪ್ಪನವರ ಉದ್ಘಾಟಿಸಿದರು.
ಉತ್ತಮ ಮನೋಭಾವದಿಂದ ಬ್ಯಾಂಕ್‍ಗಳ ಪ್ರಗತಿ
ರಬಕವಿ-ಬನಹಟ್ಟಿ,ನ29: ಸಹಕಾರಿ ಬ್ಯಾಂಕ್‍ಗಳು ಪ್ರಗತಿ ಹೊಂದಬೇಕಾದರೆ ಉತ್ತಮ ಮನೋಭಾವದೊಂದಿಗೆ ಬ್ಯಾಂಕ್‍ಗಳ ಜೊತೆಗಿನ ಗ್ರಾಹಕರ ಅಥವಾ ಶೇರುದಾರರ ಪಾತ್ರ ಹಿರಿದಾಗಿದೆ ಎಂದು ಕಾಡಸಿದ್ಧೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶಂಕರ ಜುಂಜಪ್ಪನವರ ಹೇಳಿದರು.
ರವಿವಾರ ನಗರದ ಭದ್ರನ್ನವರ ಕಲ್ಯಾಣ ಮಂಟಪದಲ್ಲಿ ಜರುಗಿದ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಹಕಾರಿ ರಂಗವು ಕುಟುಂಬವಿದ್ದಂತೆ ಸಾಮಾನ್ಯ ಸಭೆಯಲ್ಲಿ ಪ್ರತಿಯೊಬ್ಬ ಶೇರುದಾರನದ್ದೂ ಪರಮಾಧಿಕಾರವಿರುತ್ತದೆ. ಸಹಕಾರಿ ಬ್ಯಾಂಕ್‍ಗಳ ಅಭಿವೃದ್ಧಿ ವೇಗ ಹೊಂದಲು ಠೇವು ಮತ್ತು ಸಾಲಗಳ ವರ್ಗಾವಣೆಯಿಂದ ಪ್ರಗತಿ ಸಾಧ್ಯವೆಂದರು.
ವೇದಿಕೆ ಮೇಲೆ ಜನತಾ ಶಿಕ್ಷಣ ಸಂಘದ ಚೇರಮನ್ ಬಸವರಾಜ ಜಾಡಗೌಡ, ಗಜಾನನ ವಿದ್ಯುತ್ ಸೊಸೈಟಿಯ ಘೂಳಪ್ಪ ಮೊಳೆಗಾಂವಿ, ಸಹಕಾರಿ ನೂಲಿನ ಗಿರಣಿ ಅಧ್ಯಕ್ಷ ವಿಜಯಕುಮಾರ ಜುಂಜಪ್ಪನವರ, ವಿರುಪಾಕ್ಷ ಕೊಕಟನೂರ, ಸಿದ್ರಾಮಪ್ಪ ಸವದತ್ತಿ, ಮಲ್ಲಣ್ಣ ಕಕಮರಿ, ಬಸವರಾಜ ಭದ್ರನ್ನವರ, ವಿಜಯ ಹುಡೇದಮನಿ, ಶಾರದಾ ಕಾಡದೇವರ, ಸವಿತಾ ಬಾಣಕಾರ, ಮಹೇಂದ್ರ ಹೊರಗಿನಮನಿ, ಶ್ರೀಶೈಲ ಯಾದವಾಡ, ರಾಜಶೇಖರ ಶಿವಪೂಜಿ, ಶಶಿಕಾಂತ ಹುನ್ನೂರ, ಸುರೇಶ ಅಬಕಾರ, ದುಂಡಪ್ಪ ಮಾಚಕನೂರ, ಜಗದೀಶ ಕೋರಿಪೇಠ, ಶಿವಲಿಂಗಪ್ಪ ಫಕೀರಪುರ, ಉಪಸ್ಥಿತರಿದ್ದರು.
ಇದೇ ಸಂದರ್ಭ ಕೊರೊನಾ ಯೋಧರಾಗಿ ಸೇವೆ ಸಲ್ಲಿಸಿದ ತಹಶೀಲ್ದಾರ ಪ್ರಶಾಂತ ಚನಗೊಂಡ, ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ, ಸಮುದಾಯ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಹುಡೇದಮನಿ, ಗ್ರೇಡ್-2 ತಹಶೀಲ್ದಾರ ಎಸ್.ಬಿ. ಕಾಂಬಳೆ ಸೇರಿದಂತೆ ಅನೇಕರನ್ನು ಸನ್ಮಾನಿಸಲಾಯಿತು.
ಓಂಪ್ರಕಾಶ ಕಾಬರಾ ಸ್ವಾಗತಿಸಿದರು. ವ್ಯವಸ್ಥಾಪಕ ಮಹಾನಿಂಗ ಬಾಗಲಕೋಟ ನಿರೂಪಿಸಿದರು. ಸುರೇಶ ಕೋಪರ್ಡೆ ವಂದಿಸಿದರು. ನಿಂಗಪ್ಪ ಹೊನವಾಡ, ಪ್ರಭಾಕರ ಮೊಳೇದ, ಗೌರಿಹರ ಮುತ್ತೂರ, ಶ್ರೀಶೈಲ ದಭಾಡಿ, ಮಹಾದೇವ ಚರ್ಕಿ, ಬ್ರಿಜ್‍ಮೋಹನ ಡಾಗಾ, ಸದಾಶಿವ ಶಿರೋಳ, ಸಂಜಯ ಬಿದರಿ, ಗೀತಾ ಬಡೇಮಿ ಸೇರಿದಂತೆ ಅನೇಕರಿದ್ದರು.

Social Plugin