ಬನಹಟ್ಟಿಯಲ್ಲಿ ಮಕ್ಕಳ ಸಂಗಮದ ವತಿಯಿಂದ ಮಕ್ಕಳದಿನಾಚರಣೆ ನಿಮಿತ್ತ ಕಾರ್ಯಕ್ರಮದಲ್ಲಿ ಮಕ್ಕಳ ಸಾಹಿತಿ ಜಯವಂತ ಕಾಡದೇವರ ಮಾತನಾಡಿದರು. 

ಮಕ್ಕಳನ್ನು ಆಸ್ತಿಯನ್ನಾಗಿ ಮಾಡಿ : ಕಾಡದೇವರ
ರಬಕವಿ-ಬನಹಟ್ಟಿ,ನ14: ಪ್ರತಿಯೊಬ್ಬ ಮಕ್ಕಳು ಉತ್ತಮ ಶಿಕ್ಷಣ, ಸಂಸ್ಕøತಿ, ಜ್ಞಾನವನ್ನು ಪಡೆದುಕೊಳ್ಳಬೇಕು. ಆ ನಿಟ್ಟಿನಲ್ಲಿ ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿ ಮಾಡಿ ಅವರ ಭವಿಷ್ಯವನ್ನು ರೂಪಿಸಿ ಎಂದು ಹಿರಿಯ ಮಕ್ಕಳ ಸಾಹಿತಿ ಜಯವಂತ ಕಾಡದೇವರ ಹೇಳಿದರು.
ಅವರು ನಗರದ ಡಾ. ಸ. ಜ. ನಾಗಲೋಟಿಮಠ ಸಮುದಾಯಭವನದಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆ ನಿಮಿತ್ತ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ವಾತಂತ್ರ ಭಾರತದ ಮೊದಲ ಪ್ರಧಾನಿ ಜವಹಾರಲಲ ನೆಹರು ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದೆ. ನಾವು ಜೀವನದಲ್ಲಿ ನಮ್ಮ ನಾಗರಿಕ ಕರ್ತವ್ಯಗಳನ್ನು ಮಾಡಿದ್ದೇ ಆದಲ್ಲಿ ಪಂಡಿತ ಜವಹಾರಲಾಲ ನೆಹರು ಅಂತವರಿಗೆ ಕೃತಜ್ಞತೆ ಸಲ್ಲಿಸಿದಂತಾಗುತ್ತದೆ. ನೆಹರು ಒಬ್ಬ ಸ್ವಾತಂತ್ರ ಹೋರಾಟಗಾರ, ಪ್ರಧಾನಿ ಅಷ್ಠೇ ಅಲ್ಲ. ಅವರು ಒಬ್ಬ ಒಳ್ಳೆಯ ಲೇಖಕರಾಗಿದ್ದರು. ಇಂತಹ ರಾಷ್ಟ್ರನಾಯಕರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಅವರ ಜಯಂತಿಗಳು ಆಚರಣೆಗೆ ಮಹತ್ವ ಬರುತ್ತದೆ ಎಂದರು. 
ಈ ಸಂದರ್ಭದಲ್ಲಿ ಶಿಕ್ಷಕಿ ರಾಜೇಶ್ವರಿ ಪರಾಳಮಠ, ಕುಶಾಲ ಕಾಡದೇವರ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಉಷಾ ಪಟ್ಟಣಶೆಟ್ಟಿ ಆಗಮಿಸಿದ್ದರು. 
ಕಾರ್ಯಕ್ರಮದಲ್ಲಿ ಮಕ್ಕಳಾದ ನಿರೀಕ್ಷಾ, ಆದರ್ಶ, ಅನುಶಾ, ಪ್ರಣವ, ಓಂಕಾರ, ಸೌಮ್ಯಾ, ಅಮೃತಾ, ವಿಶೇಷ ಸೇರಿದಂತೆ ಅನೇಕರು ಇದ್ದರು. 
ಋತು ಕಾಡದೇವರ ನಿರೂಪಿಸಿದರು. ಶ್ರೇಯಾ ಕಾಡದೇವರ ಸ್ವಾಗತಿಸಿದರು. ಕೊನೆಗೆ ಪೂರ್ವಿ ಕಾಡದೇವರ ವಂದಿಸಿದರು.