ಬನಹಟ್ಟಿಯ ತಮ್ಮಣ್ಣಪ್ಪ ಚಿಕ್ಕೋಡಿ ಕಾಲೇಜಿನ ಉಪನ್ಯಾಸಕ ಮತ್ತು ಸಿಬ್ಬಂದಿ ವರ್ಗದವರ ಗಂಟಲು ದ್ರವವನ್ನು ಆರೋಗ್ಯ ಇಲಾಖೆಯವರು ತೆಗೆದುಕೊಳ್ಳುತ್ತಿರುವುದು.
ಉಪನ್ಯಾಸಕ, ಸಿಬ್ಬಂದಿ ವರ್ಗದವರು ಗಂಟಲು ದ್ರವ ಪರೀಕ್ಷೆ
ಕೋವಿಡ್ -19 ಹರಡದಂತೆ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕಾಗಿದೆ
ರಬಕವಿ-ಬನಹಟ್ಟಿವನ14: ಸರ್ಕಾರದ ಆದೇಶದಂತೆ ಕಾಲೇಜು ಆರಂಭಕ್ಕಿಂತ ಮುಂಚಿತವಾಗಿ ಉಪನ್ಯಾಸಕರ ಮತ್ತು ಸಿಬ್ಬಂದಿ ವರ್ಗದವರ ಕೋವಿಡ್ ಪರೀಕ್ಷೆಯ ನಿಮಿತ್ತವಾಗಿ ಗಂಟಲು ದ್ರವ ಪಡೆದುಕೊಳ್ಳಲಾಯಿತು. ಕೋವಿಡ್-19 ಹರಡದಂತೆ ಪ್ರತಿಯೊಬ್ಬರು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ಪ್ರಾಚಾರ್ಯ ಡಾ.ಜಿ.ಆರ್.ಜುನ್ನಾಯ್ಕರ್ ತಿಳಿಸಿದರು.
ಅವರು ಶುಕ್ರವಾರ ಸ್ಥಳೀಯ ತಮ್ಮಣ್ಣಪ್ಪ ಚಿಕ್ಕೋಡಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕ ಮತ್ತು ಸಿಬ್ಬಂದಿ ವರ್ಗದವರ ಕೋವಿಡ್-19 ಪರೀಕ್ಷಾ ಸಂದರ್ಭದಲ್ಲಿ ಪತ್ರಿಕೆಯ ಜೊತೆಗೆ ಮಾತನಾಡಿದರು.
ಕಾಲೇಜಕ್ಕೆ ಬರುವ ಸಂದರ್ಭದಲ್ಲಿ ಪ್ರತಿಯೊಬ್ಬರು ಮುಂಜಾಗ್ರತ ಕ್ರಮವಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಕೋವಿಡ್-19 ಕುರಿತು ಜಾಗೃತಿ ಇನ್ನಷ್ಟು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಗಮನ ನೀಡಬೇಕು ಎಂದು ಡಾ,ಜುನ್ನಾಯ್ಕರ್ ತಿಳಿಸಿದರು.
ಸ್ಥಳೀಯ ಸಮುದಾಯದ ಆರೋಗ್ಯ ಕೇಂದ್ರದ ಅಪ್ಪಾಜಿ ಹೂಗಾರ ಮತ್ತು ರವೀಂದ್ರ ಸೊಲ್ಲಾಪುರ ಒಟ್ಟು 53 ಉಪನ್ಯಾಸಕ ಮತ್ತು ಸಿಬ್ಬಂದಿ ವರ್ಗದವರ ಗಂಟಲು ದ್ರವ ಪಡೆದುಕೊಂಡರು.
ಈ ಸಂದರ್ಭದಲ್ಲಿ ವೈ.ಬಿ.ಕೊರಡೂರ, ಡಾ.ಮನೋಹರ ಶಿರೋಳ, ಡಾ.ರೇಶ್ಮಾ ಗಜಕೋಶ, ಗೀತಾ ಸಜ್ಜನ, ಸುರೇಶ ನಡೋಣಿ, ಶಂಭು ಉಕ್ಕಲಿ, ಡಾ.ರಮೇಶ ಮಾಗುರಿ, ರಶ್ಮಿ ಕೊಕಟನೂರ, ಆರತಿ ಅಡವಿತೋಟ, ಡಾ.ಗೀತಾ ಗೊಂದಕರ, ಗೋಕುಲ ಕಾಬರಾ, ಎನ್.ಎಂ. ಭಜಂತ್ರಿ ಸೇರಿದಂತೆ ಅನೇಕರು ಇದ್ದರು.