ಬನಹಟ್ಟಿಯಲ್ಲಿ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವದ ಪೂರ್ವಬಾವಿ ಸಭೆಯಲ್ಲಿ ಸೋಮವಾರ ಪೇಟೆ ಸಮಸ್ತ ದೈವ ಮಂಡಳಿಯ ಉಪಾಧ್ಯಕ್ಷ ಮಲ್ಲಿಕಾರ್ಜುನ ತುಂಗಳ ಮಾತನಾಡಿದರು.
ಬನಹಟ್ಟಿ: ಸರಳವಾಗಿ ಜಾತ್ರೆ ಆಚರಿಸಲು ನಿರ್ಧಾರ
ರಬಕವಿ-ಬನಹಟ್ಟಿ,ನ13: ಕೊವಿಡ್-19 ಹಿನ್ನಲೆಯಲ್ಲಿ ಸರಳವಾಗಿ ಶ್ರೀ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ಸೋಮವಾರ ಪೇಟೆ ಸಮಸ್ತ ದೈವ ಮಂಡಳಿಯ ಉಪಾಧ್ಯಕ್ಷ ಮಲ್ಲಿಕಾರ್ಜುನ ತುಂಗಳ ಹೇಳಿದರು.
ಅವರು ನಗರದ ಮಹಾದೇವರ ದೇವಸ್ಥಾನದಲ್ಲಿ ನಡೆದ ಶ್ರೀ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದರು. ಪ್ರತಿ ವರ್ಷದಂತೆ ಇದೇ ನ. 16 ರಂದು ದೀಪಾವಳಿಯ ಪಾಡ್ಯದಿನದಂದು ನಡೆಯುವ ಜಾತ್ರೆಯನ್ನು ಕೊವಿಡ್ ಹಿನ್ನಲೆಯಲ್ಲಿ ಸರಕಾರದ ನಿರ್ದೇಶನದಂತೆ ಸಾಮಾಜಿಕ ಅಂತರ, ಮಾಸ್ಕ ಧರಿಸಿ ವ್ಯವಸ್ಥಿತವಾಗಿ ಆಚರಿಸಲಾಗುವುದು. ಈ ಸಲದ ರಥೋತ್ಸವವನ್ನು ಸಾಂಕೇತಿಕವಾಗಿ ನಗರದ ಸೋಮವಾರ ಪೇಟೆಯ ದೈವ ಮಂಡಳಿಯ ಜಾಗೆಯಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಜಾತ್ರೆ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಪ್ರಭಾಕರ ಮೊಳೇದ, ಮಲ್ಲಿನಾಥ ಕಕಮರಿ ಮಾತನಾಡಿದರು. ಮಹಾಶಾಂತ ಶೆಟ್ಟಿ, ಶಿವಾನಂದ ಬುದ್ನಿ, ಓಂಪ್ರಕಾಶ ಮನಗೂಳಿ, ಹುಚ್ಚಪ್ಪ ಬಾಗೇವಾಡಿ, ಮಲ್ಲಿಕಾರ್ಜುನ ಬಾವಲತ್ತಿ, ಪ್ರಶಾಂತ ಕೊಳಕಿ, ಸುರೇಶ ಗಣೇಶನವರ, ಕಿರಣ ಆಳಗಿ, ಗುರಸಿದ್ದಪ್ಪ ಚನಾಳ, ಚೆನ್ನಪ್ಪ ಗುಣಕಿ, ಹಿರಾಚಂದ ಕಾಸರ, ಕಲ್ಲಯ್ಯ ಮಠಪತಿ, ಶಿವನಿಂಗ ಶಿರಹಟ್ಟಿ, ಬುಟ್ಟನ್ನವರ, ಈರಣ್ಣ ಗೊಬ್ಬಾಣಿ ಸೇರಿದಂತೆ ಅನೇಕರು ಇದ್ದರು.

Social Plugin