ತೇರದಾಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ತಾಲೂಕಾ ಹೋರಾಟ ಸಮೀತಿಯ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾಳಿಕಾಯಿ ಮಾತನಾಡಿದರು.
ತೇರದಾಳ : ತೇರದಾಳ ಸತ್ಪುರುಷರ ನಾಡು, ತೇರದಾಳದ ಅಲ್ಲಮಪ್ರಭುಗಳು, ಮಹಾಲಿಂಗಪುರದ ಮಹಾಲಿಂಗೇಶ್ವರರು, ಬನಹಟ್ಟಿಯ ಕಾಡಸಿದ್ದೇಶ್ವರರು ಪವಾಡ ಪುರುಷರು, ಈ ಭಾಗದಲ್ಲಿ ನೆಲೆಸಿರುವ ಈ ನೆಲದಲ್ಲಿ ನಾವು ಇಂತಹ ಅಮಾನವೀಯ ಘಟನೆಯನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಶರಣ ಸಂಸ್ಕೃತಿ ಸಂಪ್ರದಾಯದಂತ ಶಾಸಕರಿದ್ದ ನಮ್ಮ ತೇರದಾಳ ಮತಕ್ಷೇತ್ರದಲ್ಲಿ ಆಗಿ ಹೋಗಿದ್ದಾರೆ. ಇಂತಹ ಗೂಂಡಾ ಶಾಸಕರನ್ನು ಪಡೆದಿದ್ದು ನಮ್ಮ ದುರ್ದೈವ. ಅವರಿಂದ ನಾವು ಬಹಳಷ್ಟು ಕೆಲಸವನ್ನು ನಿರೀಕ್ಷೆ ಮಾಡಿರಲಿಲ್ಲ. ಪಕ್ಷ ಕಟ್ಟಿ ಬೆಳಸಿರುವ ನಾವು ಒಬ್ಬ ಒಳ್ಳೆಯ ವ್ಯಕ್ತಿ ಎಂದು ತಿಳಿದು ಅವರನ್ನು ಶಾಸಕರನ್ನಾಗಿ ಮಾಡಿದ್ದೇವೆ, ಕಾರ್ಯಕರ್ತರ ಜೊತೆ ಸೌಜನ್ಯವಾಗಿ ಮಾತನಾಡಿಸುವುದು ಸಹ ಅವರಿಗೆ ಗೊತ್ತಿಲ್ಲ. ಇದೊಂದು ರಾಷ್ಟ್ರ ಭಕ್ತರ ಪಕ್ಷ, ಸಂಘದ ಸಿದ್ಧಾಂತದಲ್ಲಿ ಬೆಳೆದು ಬಂದ ಪಕ್ಷದಲ್ಲಿ ಇಂತಹ ಕೆಟ್ಟ ವ್ಯಕ್ತಿ ಇರೋದು ಯೋಗ್ಯವಲ್ಲ, ಪಕ್ಷದ ಪ್ರಮುಖರು ಕ್ರಮ ಕೈಗೊಳ್ಳಬೆಕು. ಒಂದು ವೇಳೆ ಕ್ರಮ ಕೈಗೊಳ್ಳಲಿಲ್ಲವೆಂದರೆ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ತಾಲೂಕಾ ಹೋರಾಟ ಸಮೀತಿಯ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾಳಿಕಾಯಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸಂಜೆ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಮಹಾಲಿಂಗಪುರದ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಮಹಿಳಾ ಚುನಾಯಿತ ಪ್ರತಿನಿಧಿಯನ್ನು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಎಳೆದಾಡಿ ಅವರನ್ನು ತಳ್ಳಿ ನಾಲ್ಕು ಮೆಟ್ಟಿಲಿನಿಂದ ಕೆಳಗೆ ಕೆಡವಿ ಅವಮಾನ ಮಾಡಿದ್ದು ಅತ್ಯಂತ ಹೇಯವಾದ ಕೃತ್ಯ, ತೇರದಾಳ ಮತಕ್ಷೇತ್ರದ ಘನತೆ ಗೌರವವನ್ನು ಮಣ್ಣು ಪಾಲು ಮಾಡಿದ ಘಟನೆ. ರಾಜಕೀಯ ಕ್ಷೇತ್ರದಲ್ಲಿ ಅನೇಕ ಸಂದರ್ಭದಲ್ಲಿ ರಾಜಕೀಯ ಮೇಲಾಟಗಳು, ಅನೇಕ ಸಾರಿ ಗಲಾಟೆಗಳು ನಡೆದಿರುವುದು ಎನು ಹೊಸದಲ್ಲ. ಆದರೆ ಒಬ್ಬ ಶಾಸಕರಾಗಿ, ಕೈಮಗ್ಗ ನಿಗಮದ ಅಧ್ಯಕ್ಷರಾಗಿ ಮತದಾನ ಮಾಡಲು ಬಂದಿರುವ ಮಹಿಳೆಯನ್ನು ತಳ್ಳಿದ್ದು ಇಡೀ ದೇಶದಲ್ಲಿಯೇ ಸುದ್ದಿ ಮಾಡಿದೆ. ಅನೇಕ ಮಾಧ್ಯಮಗಳಲ್ಲಿ ತೇರದಾಳ ಶಾಸಕರು ಎಂದು ತೇರದಾಳವನ್ನು ಉಲ್ಲೇಖ ಮಾಡಿ ಬಿತ್ತರಿಸುತ್ತಿರುವುದನ್ನು ಕಂಡು ನಮಗೆ ನೋವು ವಾಗಿದ್ದು ಅಲ್ಲದೆ ಆಕ್ರೋಶವಾಗುತ್ತಿದೆ. ಶಾಸಕರು ಎಂದರೆ ಮತಕ್ಷೇತ್ರದ ಎಲ್ಲ ಜನತೆಯ ಪ್ರತಿನಿಧಿಯಾಗಿರುತ್ತಾರೆ. ಈ ರೀತಿಯ ಒಂದು ಘಟನೆಯಲ್ಲಿ ಮುಂದಾಳತ್ವವಹಿಸಿ ದೌರ್ಜನ್ಯವೆಸಗಿದ್ದು ಪ್ರಜಾಪ್ರಭುತ್ವಕ್ಕೆ ಕೊಟ್ಟಿರುವ ಒಂದು ದೊಡ್ಡ ಧಕ್ಕೆ ಇದನ್ನು ನಾವು ಖಂಡಿಸುತ್ತೇವೆ. ಈ ಘಟನೆಯನ್ನು ಸಮರ್ಥನೆ ಮಾಡುವುದು ಅತ್ಯಂತ ನಾಚಿಗೇಡಿ ಸಂಗತಿ. ಎಲ್ಲ ಮಾಧ್ಯಮಗಳು ಬಿತ್ತರಿಸುತ್ತಿರುವುದನ್ನು ಲಕ್ಷಾಂತರ ಜನರು ನೋಡುತ್ತಿದ್ದಾರೆ. ಶಾಸಕ ಸಿದ್ದು ಸವದಿ ತಳ್ಳುತ್ತಿರುವುದು ಅದರಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ ಆದರೂ ಅವರು ಸಮರ್ಥನೆ ಮಾಡುತ್ತಿರುವುದು ಸರಿಯಲ್ಲ. ಈ ಘಟನೆ ಇಡೀ ಸ್ತ್ರೀ ಕುಲಕ್ಕೆ ಮಾಡಿದ ಅವಮಾನವಾಗಿದೆ ಎಂದರು.
ರೇವಣೇಶ ಹಿರೇಮಠ ಹಾಗೂ ಯಾಶೀನ ಸಾತ್‍ಬಚ್ಚೆ ಮಾತನಾಡಿ ಶಾಸಕರಾಗಿ ಇವರು ಇಂತಹ ಕೆಲಸವನ್ನು ಮಾಡವಂತದ್ದಲ್ಲ. ಮಾಧ್ಯಮಗಳಲ್ಲಿ ತೇರದಾಳ ಎಂದು ಬರುತ್ತಿರುವುದು ನಮಗೆ ನೋವು ಉಂಟಾಗಿದೆ. ಶಾಸಕರಿಂದ ತೇರದಾಳ ಪಟ್ಟಣಕ್ಕೆ ಅಂಟಿಕೊಂಡಿರುವ ದೊಡ್ಡ ಕಳಂಕ. ಮಹಿಳಾ ಜನಪ್ರತಿನಿಧಿಗೆ ಈ ರೀತಿ ಅವಮಾನ ಮಾಡಿರುವುದು ಖಂಡನೀಯ ಎಂದರು. ಈ ಸಂದರ್ಭದಲ್ಲಿ ಶಂಕರ ಅಥಣಿ ಇದ್ದರು.
Social Plugin