ಸಂಘದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಸಾಧ್ಯ
ರಬಕವಿ-ಬನಹಟ್ಟಿ,ನ22: ಸಮಾಜವನ್ನು ಮುಖ್ಯ ವಾಹಿನಿಗೆ ತರಲು ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಗಜಾನನ ವಿದ್ಯುತ್ ಮಗ್ಗಗಳ ನೇಕಾರ ಸಂಘದ ಅಧ್ಯಕ್ಷ ಘೂಳಪ್ಪ ಮೊಳೆಗಾಂವಿ ಹೇಳಿದರು.
ಸೋಮವಾರ ನಗರದ ಬಂಗಾರೆವ್ವ ತಟ್ಟಿಮನಿ ಸಮುದಾಯ ಭವನದಲ್ಲಿ 38ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡುತ್ತಿದ್ದರು. ಸಂಘವನ್ನು ರಚನಾತ್ಮಕವಾಗಿ ಬೆಳೆಸುವ ಹಾಗೂ ಬಳಸುವ ಮೂಲಕ ಸಮಾಜದ ಪ್ರಗತಿಗಾಗಿ ಶ್ರಮಿಸಬೇಕು. ಜೀವನದ ಮೂಲಭೂತ ಸೌಕರ್ಯಗಳಿಗಾಗಿ ಹಾಗೂ ಶಿಕ್ಷಣಕ್ಕಾಗಿ ಅಗತ್ಯವಿರುವ ಆರ್ಥಿಕ ಸೌಲಭ್ಯವನ್ನು ನಿಮ್ಮದೇ ಆದ ಈ ಬ್ಯಾಂಕಿನ ಮೂಲಕ ಸೌಲಭ್ಯ ಪಡೆದುಕೊಂಡು ವೈಯಕ್ತಿಕವಾಗಿ ಅಭಿವೃದ್ಧಿ ಹೊಂದುವುದರ ಜೊತೆಗೆ ಸಂಘವನ್ನು ಉಳಿಸಿ ಬೆಳೆಸಿ ಎಂದರು.
ಈ ಸಂದರ್ಭದಲ್ಲಿ ಶಂಕರ ಜುಂಜಪ್ಪನವರ ಮಾತನಾಡಿ, ಸಣ್ಣ ಸಣ್ಣ ಬ್ಯಾಂಕುಗಳು ಬೆಳೆಸುವ ನಿಟ್ಟಿನಲ್ಲಿ ಸಂಘದ ಎಲ್ಲ ಸದಸ್ಯರು ಸಹಕರಿಸಬೇಕು. ಬ್ಯಾಂಕ ಠೇವಣಿ ಹೆಚ್ಚಳದಿಂದ ಬ್ಯಾಂಕನ ಬೆಳವಣಿಗೆಯಾಗುತ್ತದೆ ಎಂದರು.
ಹರಿಪ್ರಕಾಶ ಕಾಬರಾ ಮಾತನಾಡಿ, ಸಂಘದ ಅಭಿವೃದ್ಧಿಗೆ ಸದಸ್ಯರ ಸಲಹೆ ಸೂಚನೆಗಳು ಅಗತ್ಯ. ಸದಸ್ಯರು ಸಂಘದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಿಬೇಕು. ಸಂಘದ ಎಲ್ಲ ಸಕ್ರಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಘದ ಏಳ್ಗೆಗೆ ಪ್ರತಿಯೊಬ್ಬರು ಶ್ರಮಿಸಬೇಕು. ಸಂಘವು ಈ ಸಾಲಿನಲ್ಲಿ ಒಟ್ಟು ರೂ. 1ಲಕ್ಷ 22 ಸಾವಿರದಾ 123 ಗಳ ಲಾಭ ಮಾಡಿದೆ. ಶೇ.8 ರಷ್ಟು ಲಾಭಾಂಶವನ್ನು ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಓಂಪ್ರಕಾಶ ಕಾಬರಾ, ಶಂಕರ ಜಾಲಿಗಿಡದ, ಸಿದ್ರಾಮಪ್ಪ ಸವದತ್ತಿ, ನಿಂಗಪ್ಪ ಹೊನವಾಡ, ಸಂಜಯ ಜವಳಗಿ, ಮಲ್ಲಿಕಾರ್ಜುನ ಕಕಮರಿ, ಅಶೋಕ ಬಡ್ಡೂರ, ಮಹಾದೇವ ಬಡ್ಡೂರ, ಮಲ್ಲಪ್ಪ ಹೂಲಿ, ಈಶ್ವರ ಸುಟ್ಟಟ್ಟಿ, ಪಂಡಿತ ಪಟ್ಟಣ, ಈಶ್ವರಪ್ಪ ಕುಲಗೋಡ, ಶ್ರೀಶೈಲ ಭದ್ರನ್ನವರ, ದ್ರಾಕ್ಷಾಯಿಣಿ ಜಯವಂತ ಕುಲಗೋಡ, ಮಹಾನಂದಾ ಮಹಾದೇವ ಬಾಣಕಾರ, ಪ್ರಕಾಶ ಕರಲಟ್ಟಿ, ಸಂಜಯ ಬಾಡನವರ ಹಾಜರಿದ್ದರು.

Social Plugin