5 ವರ್ಷ ಅವಧಿ ಪೂರ್ಣಗೊಳಿಸಿದ ಸಿಆರ್‍ಪಿ, ಬಿಆರ್‍ಪಿ ಗಳಿಗೆ ವರ್ಗಾವಣೆ ಪೂರ್ವದಲ್ಲಿ ಕೌನ್ಸಲಿಂಗ ನಡೆಸುವಂತೆ ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಕ್ಷರಿ ಅವರಿಗೆ ವಿಜಯಪುರ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಎಸ್. ಸಿ. ಶೆಡಶ್ಯಾಳ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ನಿರ್ದೇಶಕರಾದ ಸುನೀಲಗೌಡ ಬಿರಾದಾರಪಾಟೀಲ, ಸಿಆರ್‍ಪಿ ಜಿ. ಎಸ್. ಲಕ್ಕುಂಡಿಮಠ, ಬಿ. ಇ. ಚಲವಾದಿ, ಎಂ. ಆರ್. ಬಡಿಗೇರ, ಜೆ. ಎನ್. ಹೊನಸೂರೆ, ಎಸ್. ಜಿ. ಬುರಾಣಗೋಳ ಅವರು ಸೋಮವಾರ ಬನಹಟ್ಟಿಯ ವಿಶ್ರಾಂತಿ ಗೃಹದಲ್ಲಿ ಮನವಿ ಸಲ್ಲಿಸಿದರು.