ದಾನಮ್ಮದೇವಿಗೆ ಬೆಳ್ಳಿ ಪ್ರಭಾವಳಿ ಸಮರ್ಪಣೆ
ರಬಕವಿ-ಬನಹಟ್ಟಿ,ನ22: ರಬಕವಿಯ ದಾನಮ್ಮಾದೇವಿ ದೇವಸ್ಥಾನದಲ್ಲಿ ಬೆಳ್ಳಿ ಪ್ರಭಾವಳಿ ಸಮರ್ಪಣೆ ಮಾಡಲಾಯಿತು.
ರವಿವಾರ ಬೆಳಿಗ್ಗೆ 11 ಗಂಟೆಗೆ ಸರಳ ಕಾರ್ಯಕ್ರಮದೊಂದಿಗೆ ಜರುಗಿದ ಕಾರ್ಯಕ್ರಮದಲ್ಲಿ ಸುಮಾರು 6 ಕೆಜಿಗೂ ಅಧಿಕ ತೂಕದ ಬೆಳ್ಳಿಯ ಪ್ರಭಾವಳಿಯನ್ನು ದಾನಮ್ಮದೇವಿ ಮೂರ್ತಿ ಹಿಂಭಾಗ ಅಲಂಕರಿಸುವಲ್ಲಿ ದಾನಮ್ಮದೇವಿ ದೇವಸ್ಥಾನ ಟ್ರಸ್ಟ್ ಭಕ್ತಿ ಮೆರೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಉಮಾಶೇಖರ ಸ್ವಾಮಿ ಹಿರೇಮಠ, ಪ್ರಾಮಾಣಿಕತೆ ಕೆಲಸಗಳಿಂದ ಎಲ್ಲವೂ ಸಾಧ್ಯ. ನಿಸ್ವಾರ್ಥ ಸೇವೆಯಿಂದ ದೇವರನ್ನು ಕಾಣುವಲ್ಲಿ ಸಾಧ್ಯವೆಂದರು. ಮಠ-ಮಂದಿರಗಳು ಜನತೆಗೆ ಹೊಸ ಚೈತನ್ಯ ನೀಡುವ ಕೇಂದ್ರಗಳಾಗಿವೆ. ಶಾಂತ ಹಾಗು ಮುಗ್ಧತೆಯನ್ನು ಕಲ್ಪಿಸುವಲ್ಲಿ ದೇವಾಲಯಗಳ ಪಾತ್ರ ಮುಖ್ಯವೆಂದು ಹಿರೇಮಠ ಹೇಳಿದರು.
ಪ್ರೊ. ಎಂ.ಎಸ್. ಬದಾಮಿ ಮಾತನಾಡಿ, ಬಂಗಾರ, ಬೆಳ್ಳಿ, ಕಲ್ಲು ದೇವರುಗಳಿಂದ ಕಾಣುವ ದೇವರುಗಳನ್ನು ಅಷ್ಟೇ ಪ್ರಭಾವಿತವಾಗಿ ಮನಸಾರೆ ಕಾಣುವದು ಮುಖ್ಯ. ಅಂದರಿಂದ ಮಾತ್ರ ದೇವರು ಒಲಿಯುವನು ಎಂದರು.
ದಾನಮ್ಮದೇವಿ ಟ್ರಸ್ಟ್ ಅಧ್ಯಕ್ಷ ಶಿವಜಾತ ಉಮದಿ ಮಾತನಾಡಿ, ಕಳೆದ ವರ್ಷ ದೇವಿಯ ಮುಖವಾಡವನ್ನು ಬಂಗಾರದಿಂದ ಕೂಡಿದ್ದನ್ನು ಶ್ರೀಶೈಲ ಜಗದ್ಗುರ ಅಮೃತ ಹಸ್ತದಿಂದ ಅನಾವರಣಗೊಂಡಿತ್ತು. ಸದ್ಯ ಬೆಳ್ಳಿಯ ಪ್ರಭಾವಳಿ ಸಮರ್ಪಣೆಯಾಗಿರುವದು ನಿಜಕ್ಕೂ ಸಂತಸವೆನಿಸುತ್ತಿದೆ. ಭಕ್ತರ ಕಾರ್ಯ ಅಪಾರವಾದುದು ಎಂದರು.
ಶಿವಾನಂದ ದಾಸ್ಯಾಳ, ಸುರೇಶ ಚೆನ್ನಿ, ಉದಯ ಜಿಗಜಿನ್ನಿ, ಸಂಜಯ ತೇಲಿ, ಡಾ. ಬಾಗಕೋಟ, ಪ್ರಭು ಉಮದಿ, ಈರಣ್ಣ ಗುಣಕಿ, ವಿಶ್ವನಾಥ ಮಿರ್ಜಿ, ಬಸವರಾಜ ಜೀರಗಾಳ, ಜೇವೂರ, ಡಾ. ಸಂಗಮೇಶ ಹತಪಕಿ, ರಾಜು ಕಪಲಿ, ಬಸವರಾಜ ತೆಗ್ಗಿ, ಸೋಮಶೇಖರ ಕೊಟ್ರಶೆಟ್ಟಿ, ಶ್ರೀಶೈಲ ಭೂಯ್ಯಾರ, ಸಂಗಮೇಶ, ವಿಕಾಸ ಜಾನ್ವೇಕರ, ರಾಠಿ ಸೇರಿದಂತೆ ಅನೇಕರಿದ್ದರು.

Social Plugin