ಬನಹಟ್ಟಿಯಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ರಬಕವಿ-ಬನಹಟ್ಟಿ ಗ್ರೇಡ್-2 ತಹಶೀಲ್ದಾರ ಎಸ್. ಬಿ. ಕಾಂಬಳೆ ಮಾತನಾಡಿದರು. 

ಪ್ರತಿಯೊಬ್ಬರೂ ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿಯಬೇಕು
ರಬಕವಿ-ಬನಹಟ್ಟಿ,ನ26: ಪ್ರತಿಯೊಬ್ಬರೂ ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿದುಕೊಳ್ಳಬೇಕು ಸಂವಿಧಾನದ ಪ್ರಕಾರ ನಾವೆಲ್ಲರು ನಡೆದುಕೊಳ್ಳಬೇಕು  ಎಂದು ಗುರುದೇವ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಆರ್. ಎಂ. ಅಚನೂರ ಹೇಳಿದರು. 
ಅವರು ರಬಕವಿಯ ಗುರುದೇವ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಸಂವಿಧಾನ ದಿನಾಚರಣೆ ಮತ್ತು ವರದಕ್ಷಿಣೆ ನಿಶೇಧ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂವಿಧಾನದ ತಳಹದಿಯಲ್ಲಿ ಮುನ್ನಡೆಯುತ್ತಿರುವ ದೇಶ ಭಾರತ. ಸಂವಿಧಾನಕ್ಕೆ ಎಲ್ಲರೂ ತಲೆಬಾಗಬೇಕು. ಮೂಲಭೂತ ಹಕ್ಕು ಕರ್ತವ್ಯಗಳನ್ನು ಎಲ್ಲರೂ ಗೌರವಿಸಬೇಕು ಅಲ್ಲದೆ ಪ್ರಜಾಪ್ರಭುತ್ವದ ಅಡಿಪಾಯವೇ ಸಂವಿಧಾನ.  ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಜಾಗೃತಿ ಮೂಡಿಸಬೇಕು. ವಿಶ್ವದಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಸಂವಿಧಾನ ಅಂಗೀಕಾರಗೊಂಡ ದಿನವೇ ರಾಷ್ಟ್ರೀಯ ಸಂವಿಧಾನ ದಿನವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್. ವಾಯ್. ತಳವಾರ, ಯು. ಜೆ. ಖಟಾವಕರ, ಎಸ್. ವಿ. ದಳವಿ, ವಿ. ಜೆ. ಕೋಪರ್ಡೆ, ಎಸ್. ಎಸ್. ಕೊಡಗಾನೂರ, ಎಸ್. ಎಂ. ಕೌಜಲಗಿ, ಚಂದ್ರವ್ವ ಗಣಿ ಸೇರಿದಂತೆ ಅನೇಕರು ಇದ್ದರು.