ರಬಕವಿಯಲ್ಲಿ ಡಾ. ಪದ್ಮಜೀತ ನಾಡಗೌಡ ಪಾಟೀಲರನ್ನು ಅಭಿಮಾನಿ ಬಳಗದಿಂದ ಸನ್ಮಾನಿಸಲಾಯಿತು.

ಬಡವರ ಸೇವೆಯೇ ನನ್ನ ಗುರಿ-ನಾಡಗೌಡ
ರಬಕವಿ-ಬನಹಟ್ಟಿ,ನ26:ಸಮಾಜ ಸೇವೆಗಳಿಗೆ ಖರ್ಚು ಮಾಡುತ್ತಿರುವ ಪ್ರತಿಯೊಂದು ಪೈಸೆಯೂ ನನ್ನ ಕಷ್ಟಾರ್ಜಿತ ಹಾಗು ಸ್ವಂತ ಹಣವಾಗಿದೆ. ಸಮಾಜ ಸೇವೆ ಮಾಡುವ ಗುಣ ಹಾಗು ಶಕ್ತಿ ಭಗವಂತ ನನಗೆ ನೀಡಲೆಂದು ಬೇಡಿಕೊಳ್ಳುವೆ ಎಂದು ಖ್ಯಾತ ನೇತ್ರ ತಜ್ಞ, ಕಾಂಗ್ರೆಸ್ ಯುವ ಮುಖಂಡ ಡಾ. ಪದ್ಮಜೀತ ನಾಡಗೌಡ ಹೇಳಿದರು.
ಇಂದು ಪದ್ಮಜೀತ ನಾಡಗೌಡ ಪಾಟೀಲ ಅಭಿಮಾನಿ ಬಳಗದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಬದಲಾಗಬಹುದೇ ಎಂಬುದನ್ನು ನಾವು ಮೊದಲು ಅರಿಯಬೇಕು. ನಾವು ಬದಲಾಗಲು ಸಾಧ್ಯವಾಗುವದಾದರೇ ದೇಶವೇ ಬದಲಾವಣೆ ಸಾಧ್ಯವೆಂದರು. ರಾಷ್ಟ್ರ ಹಾಗು ಸಮಾಜವನ್ನು ಬದಲಾಯಿಸಲು ಬಯಸವವರು ಮೊದಲು ತಾವು ಬದಲಾಗಬೇಕು ಆಗ ಮಾತ್ರ ನಮ್ಮ ದೇಶ ಹಾಗು ಸಮಾಜದ ಬದಲಾವಣೆ ಸಾಧ್ಯ. ತೇರದಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಗರ ಹಾಗು ಗ್ರಾಮೀಣ ಪ್ರದೇಶಗಳ ಬಡ ಕುಟುಂಬಗಳಿಗೆ ಸಹಾಯ ಮಾಡುವಲ್ಲಿ ಕಾರ್ಯಕರ್ತರ ಪಡೆಯ ಬೆಂಬಲ ಬಹುದೊಡ್ಡದು. ಮುಂದಿನ ದಿನಗಳಲ್ಲಿಯೂ ಸಮಾಜಮುಖಿ ಕಾರ್ಯ ನಿರಂತರವೆಂದು ಡಾ. ನಾಡಗೌಡ ಪಾಟೀಲ ಹೇಳಿದರು.
ಇದೇ ಸಂದರ್ಭ ಶಂಕರ ಸೊರಗಾಂವಿ, ಸಂಜು ಜೋತಾವರ, ನೀಲಕಂಠ ಮುತ್ತೂರ, ಚಿದಾನಂದ ಗಾಳಿ, ಅಬೂಬಕರ ಬಂಡೇಬುರುಜ, ಅಸ್ಲಾಂ ಶಿಲ್ಲೇದಾರ, ಮೊಹ್ಮದ್ ಝಾರೆ, ಸುನೀಲಗೌಡ ಪಾಟೀಲ, ಚೇತನ ಕಲಾಲ, ಯಲ್ಲನಗೌಡ ಪಾಟೀಲ, ರವಿ ಬಾಡಗಿ, ಚಿದಾನಂದ ಮಟ್ಟಿಕಲ್ಲಿ, ಸಾಗರ ಚವಜ, ಸುರೇಶ ಕಬಾಡಗಿ, ಪ್ರವೀಣ ನಾಡಗೌಡ, ಮಾಸೂಂ ಇನಾಮದಾರ, ನೀಲೇಶ ದೇಸಾಯಿ, ರಾಜು ನಂದೆಪ್ಪನವರ, ಸಂಜು ಅಮ್ಮಣಗಿ ಇತರರು ಇದ್ದರು.