ವಾರಣಾಸಿಯಂತೆ ರಾಜ್ಯದ ನೇಕಾರರನ್ನೂ ಪ್ರಧಾನಿ ದತ್ತು ಪಡೆಯಲಿ
ರಬಕವಿ-ಬನಹಟ್ಟಿ,ನ26: ಕಳೆದ ಎರಡುವರೆ ವರ್ಷಗಳಿಂದ ಕೇಂದ್ರದ ಸಿಲ್ಕ್ ಬೋರ್ಡ್‍ನಿಂದ ರಾಜ್ಯದ ನೇಕಾರರ ಅನುಕೂಲಕ್ಕಾಗಿ ನಯಾ ಪೈಸೆಯಷ್ಟೂ ಅನುದಾನ ಬಂದಿಲ್ಲ. ನೇಕಾರರ ಬದುಕು ಬೀದಿಗೆ ಬಿದ್ದರೂ ಸರ್ಕಾರದ ನಿರ್ಲಕ್ಷ್ಯತನ ಸಲ್ಲದು ಎಂದು ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ಬೇಸರ ವ್ಯಕ್ತಪಡಿಸಿದರು.
ಈಚೆಗೆ ರಾಜ್ಯಸಭಾ ಸದಸ್ಯ ಕೆ. ನಾರಾಯಣರಿಗೆ ವೃತ್ತಿಪರ ನೇಕಾರರ ಹಕ್ಕೊತ್ತಯಕ್ಕೆ ಸಂಬಂಧ ಮನವಿ ಪತ್ರ ಅರ್ಪಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಪ್ರದೇಶದ ವಾರಣಾಸಿಯ ನೇಕಾರ ಸಮುದಾಯವನ್ನು ದತ್ತು ಪಡೆಯುವ ಮೂಲಕ ಪುನಶ್ಚೇತನಕ್ಕೆ ವಿಶೇಷ ಪ್ರಾಧಾನ್ಯತೆ ನೀಡುತ್ತಿರುವಂತೆ ರಾಜ್ಯದಲ್ಲಿನ ನೇಕಾರರನ್ನೂ ದತ್ತು ಪಡೆಯುವ ಮೂಲಕ ಹಲವು ದಶಕಗಳಿಂದ ಸಮಸ್ಯೆ ಎದುರಿಸುತ್ತಿದ್ದು ಕುಟುಂಬ ನಿರ್ವಹಣೆ ಸವಾಲಾಗಿದೆ. ಈಗಂತೂ ಮಾರುಕಟ್ಟೆಯಿಲ್ಲದೆ ದುಡಿಮೆಗೆ ಸಮರ್ಪಕವಾದ ಕೂಲಿ ದೊರಕುತ್ತಿಲ್ಲ. ಇವೆಲ್ಲವನ್ನೂ ಅವಲೋಕಿಸಿ ಪ್ರಧಾನಿ ಹಾಗು ರಾಜ್ಯದ ಮುಖ್ಯಮಂತ್ರಿಗಳು ಶಾಶ್ವತ ಪರಿಹಾರದ ಮೊರೆ ಹೋಗಬೇಕೆಂದರು.
ಇದೇ ಸಂದರ್ಭ ಹಳೆಹುಬ್ಬಳ್ಳಿಯ ವೀರಭಿಕ್ಷಾವ್ರತಿ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು, ಬಸವರಾಜ ಮನ್ಮಿ, ಸಂಗಪ್ಪ ಉದಗಟ್ಟಿ, ಅರ್ಜುನ ಕುಂಬಾರೆ ಸೇರಿದಂತೆ ಅನೇಕರಿದ್ದರು.

Social Plugin