ಪತ್ರಿಕೆಯಿಂದ ಕುಟುಂಬಸ್ಥರು ಅರಿತ ಸಾವಿನ ಸುದ್ದಿ
*ರೈಲಿಗೆ ತಲೆ ಕೊಟ್ಟು ವ್ಯಕ್ತಿ ಆತ್ಮಹತ್ಯೆ
ರಬಕವಿ-ಬನಹಟ್ಟಿ,ನ8: ಮನೆಯಲ್ಲಿ ಜಗಳವಾಡಿ ಮನೆ ಬಿಟ್ಟು ತೆರಳಿದ ವ್ಯಕ್ತಿಯೋರ್ವನ ಸಾವಿನ ಸುದ್ದಿ ಮೂರು ದಿನಗಳ ನಂತರ ದಿನಪತ್ರಿಕೆಯೊಂದರಲ್ಲಿ ಬಂದ ಸುದ್ದಿಯನ್ನು ಅರಿತು ಇಂದು ತೆರಳಿ ಅಂತ್ಯ ಸಂಸ್ಕಾರ ಮಾಡಿದ ಹೃದಯವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆ ಬನಹಟ್ಟಿಯಲ್ಲಿ ನಡೆದಿದೆ.
ಘಟನೆ: ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮನೆಯಲ್ಲಿ ಜಗಳವಾಡಿದ ರವಿ ಮಹಾದೇವಪ್ಪ ಆದಗೊಂಡ(50) ಸಿಟ್ಟಿನಿಂದ ರಾಯಭಾಗದತ್ತ ತೆರಳಿದ್ದಾನೆ. ಅದೇ ದಿನ 2 ಗಂಟೆ ಸುಮಾರಿಗೆ ಹತ್ತಿರದ ನಾಗರಾಳ ಕ್ರಾಸ್ ಹತ್ತಿರ ರೈಲ್ವೆ ಹಳಿ ಮೇಲೆ ಮಲಗಿದ್ದ ಸಂದರ್ಭ ಗೂಡ್ಸ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಈ ಕುರಿತು ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ ಕಳೆದ ಬುಧವಾರದಿಂದ ಅಪರಿಚತ ಶವವೆಂದು ಇಂದು ಶನಿವಾರ ಸ್ವಯಂ ಅಂತ್ಯಕ್ರಿಯೆ ನಡೆಸುವ ಸಮಯದಲ್ಲೇ ಕುಟುಂಬಸ್ಥರು ಹಾಜರಾಗಿ ಶವ ಪರಿಶೀಲಿಸಿ ಕುಟುಂಬಸ್ಥರೇ ಅಂತ್ಯ ಸಂಸ್ಕಾರ ನಡೆಸಿದರೆಂದು ತಿಳಿದು ಬಂದಿದೆ.