ಬನಹಟ್ಟಿಯ ಸಾರ್ವಜನಿಕ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಯ ಮತ್ತು ಪುಸ್ತಕ ಪ್ರದರ್ಶನ ಕಾರ್ಯಕ್ರಮಕ್ಕೆ ಮಕ್ಕಳ ಸಾಹಿತಿ ಜಯವಂತ ಕಾಡದೇವರ ಚಾಲನೆ ನೀಡಿದರು.
ಬನಹಟ್ಟಿ ನಗರಕ್ಕೆ ಸುಸಜ್ಜಿತವಾದ ಗ್ರಂಥಾಲಯದ ಅವಶ್ಯಕತೆ ಇದೆ
ರಬಕವಿ-ಬನಹಟ್ಟಿ,ನ19: ನೇಕಾರರ ಮತ್ತು ಸಾಹಿತಿಗಳ ಬೀಡಾಗಿರುವ ಬನಹಟ್ಟಿ ನಗರಕ್ಕೆ ಸುಸಜ್ಜಿತವಾದ ಗ್ರಂಥಾಲಯದ ಅವಶ್ಯಕತೆ ಇದೆ. ಈ ಕರಿತು ಸಂಬಂಧಪಟ್ಟ ಅಧಿಕಾರಿಗಳು ಗಮನ ನೀಡಬೇಕು ಎಂದು ಮಕ್ಕಳ ಸಾಹಿತಿ ಜಯವಂತ ಕಾಡದೇವರ ತಿಳಿಸಿದರು.
ಅವರು ಗುರುವಾರ ಸ್ಥಳೀಯ ಸಾರ್ವಜನಿಕ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಮತ್ತು ಪುಸ್ತಕ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ಥಳೀಯ ಗ್ರಂಥಾಲಯದಲ್ಲಿ ಉತ್ತಮವಾದ ಪುಸ್ತಕ ಭಂಡಾರವನ್ನು ಹೊಂದಿದೆ. ಅದೇ ರೀತಿಯಾಗಿ ಇಲ್ಲಿ ಓದುಗರ ಸಂಖ್ಯೆ ಕೂಡಾ ಹೆಚ್ಚಾಗಿದೆ. ಆದ್ದರಿಂದ ಇಲ್ಲಿಯ ಗ್ರಂಥಾಲಯಕ್ಕೆ ಸ್ವತಂತ್ರ ಕಟ್ಟಡದ ಅವಶ್ಯಕತೆ ಇದೆ. ದಿನ ಪತ್ರಿಕೆಗಳ ಮತ್ತು ಗ್ರಂಥಗಳ ಓದಿನಿಂದ ವ್ಯಕ್ತಿಯ ಜ್ಞಾನವು ಹೆಚ್ಚಾಗುತ್ತದೆ ಮತ್ತು ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಕಾಡದೇವರ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಂಥಾಲಯ ಅಧಿಕಾರಿ ಎಸ್.ವಿ.ನಾಡಗೌಡ ಮತ್ತು ಸಹಾಯಕ ಸತೀಶ ಬಡಿಗೇರ ಮತ್ತು ಅಶೋಕ ಹೊಸಟ್ಟಿ ಇದ್ದರು. ಈ ಸಂದರ್ಭದಲ್ಲಿ ಪುಸ್ತಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಯಿತು.