ಸಹಕಾರಿ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಸಿದ್ದು ಸವದಿ
ಆರ್ಥಿಕ ಸ್ವಾವಲಂಬಿಗಳಾಗುವಲ್ಲಿ ಸಹಕಾರಿ ಸಂಘದ ಪಾತ್ರ ಪ್ರಮುಖ
ರಬಕವಿ-ಬನಹಟ್ಟಿ,ನ19: ಆರ್ಥಿಕ ಸ್ವಾವಲಂಬಿಗಳಾಗುವಲ್ಲಿ ಸಹಕಾರಿ ಸಂಘದ ಪಾತ್ರ ಪ್ರಮುಖ ಎಂದು ಮಾಜಿ ಶಾಸಕ ಸಿದ್ದು ಸವದಿ ಹೇಳಿದರು.
ಅವಳಿ ನಗರದ ಸಹಕಾರಿ ನೂಲಿನ ಗಿರಣಿಯಲ್ಲಿ ಜಿಲ್ಲಾ ಸಹಕಾರ ಸಂಘಗಳ ಯುನಿಯನ್ ಹಾಗೂ ತೇರದಾಳ ಮತಕ್ಷೇತ್ರದ ಸಹಕಾರಿ ಸಂಘಗಳ ವತಿಯಿಂದ ಹಮ್ಮಿಕೊಂಡ 67ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
ಸಹಕಾರಿ ಕ್ಷೇತ್ರದಲ್ಲಿ ವಿಶ್ವಾಸ ಹಾಗೂ ಪ್ರಾಮಾಣಿಕತೆ ಮುಖ್ಯವಾಗಿದೆ. ಜೊತೆಗೆ ಸಂಘಗಳ ಅಭಿವೃದ್ಧಿಯಲ್ಲಿ ಸದಸ್ಯರ ಪಾತ್ರ ಬಹಳ ಮುಖ್ಯವಾದೆ. ತಾನು ಎಲ್ಲರಿಗಾಗಿ ಎಲ್ಲರೂ ತನಗಾಗಿ ಎಂಬ ತತ್ವದಡಿ ಸಹಕಾರ ಕ್ಷೇತ್ರ ಬೆಳೆದು ಬಂದಿದೆ. ಸಹಕಾರಿ ತತ್ವಗಳನ್ನು ಅಳವಡಿಸಿಕೊಂಡು ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಸಂಘಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸಹಕಾರಿ ಬ್ಯಾಂಕುಗಳು ಸಾರ್ವಜನಿಕರ ಸೇವೆಗೆ ಮೀಸಲಾಗಿವೆ ಎಂದರು.
ಸಮಾರಂಭದ ದಿವ್ಯ ಸಾನಿಧ್ಯವನ್ನು ರಬಕವಿಯ ಗುರುದೇವ ಬ್ರಹ್ನಾನಂದ ಆಶ್ರಮದ ಗುರುಸಿದ್ದೇಶ್ವರ ಶ್ರೀಗಳು ವಹಿಸಿದ್ದರು. 
ಕಾರ್ಯಕ್ರಮದಲ್ಲಿ ಬನಹಟ್ಟಿ ಸಹಕಾರಿ ನೂಲಿನ ಗಿರಣಿಯ ಅಧ್ಯಕ್ಷ ವಿಜಯಕುಮಾರ ಜುಂಜಪ್ಪನವರ, ಶಂಕರ ಜುಂಜಪ್ಪನವರ, ನಗರಸಭೆ ಅಧ್ಯಕ್ಷ ಶ್ರೀಶೈಲ ಬೀಳಗಿ, ಜಿ. ಎಸ್. ಗೊಂಬಿ, ಶ್ರೀಶೈಲ ಯಾದವಾಡ, ವಿಜಯ ಹುಡೇದಮನಿ ಸೇರಿದಂತೆ ಅನೇಕರು ಇದ್ದರು.