ತೇರದಾಳ ಪಟ್ಟಣದ ಪುರಸಭೆಗೆ ಅಧ್ಯಕ್ಷರಾಗಿ ಆಯ್ಕೆಯಾದ ಅನ್ನಪೂರ್ಣಾ ಸದಾಶಿವ ಹೊಸಮನಿ, ಉಪಾಧ್ಯಕ್ಷರಾಗಿ ಆಯ್ಕೆಯಾದ ಶಾಂತವ್ವಾ ರುದ್ರಪ್ಪ ಕಾಲತಿಪ್ಪಿ ಇವರನ್ನು ಸಂಸದ ಪಿ.ಸಿ.ಗದ್ದಿಗೌಡರ ಹಾಗೂ ಶಾಸಕ ಸಿದ್ದು ಸವದಿ ಇವರು ಸನ್ಮಾನಿಸಿದರು.
ತೇರದಾಳ ಪುರಸಭೆ ಬಿಜೆಪಿ ತೆಕ್ಕೆಗೆ
ಅಧ್ಯಕ್ಷರಾಗಿ ಅನ್ನಪೂರ್ಣ ಹೊಸಮನಿ, ಉಪಾಧ್ಯಕ್ಷರಾಗಿ ಶಾಂತವ್ವ ಕಾಲತಿಪ್ಪಿ ಆಯ್ಕೆ
ತೇರದಾಳ : ಚುನಾವಣೆ ನಡೆದು ಎರಡು ವರ್ಷಗಳ ನಂತರ ಪುರಸಭೆಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಶನಿವಾರದಂದು ನಡೆಯಿತು. ಅಧ್ಯಕ್ಷರಾಗಿ ಬಿಜೆಪಿಯ ಅನ್ನಪೂರ್ಣ ಸದಾಶಿವ ಹೊಸಮನಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಬಿಜೆಪಿಯ ಶಾಂತವ್ವ ರುದ್ರಪ್ಪ ಕಾಲತಿಪ್ಪಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪ್ರಶಾಂತ ಚನಗೊಂಡ ತಿಳಿಸಿದರು.
ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು. ಬಿಜೆಪಿಯ ಅನ್ನಪೂರ್ಣ ಸದಾಶಿವ ಹೊಸಮನಿ ಇವರಿಗೆ 15 ಮತಗಳು ಬಂದಿವೆ. ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಶಾಂತವ್ವ ರುದ್ರಪ್ಪ ಕಾಲತಿಪ್ಪಿ ಇವರಿಗೆ 15 ಮತಗಳು ಬಂದಿವೆ. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಅನ್ನಪೂರ್ಣಾ ಸದಾಶಿವ ಹೊಸಮನಿ ಹಾಗೂ ಕಾಂಗ್ರೆಸ್‍ನ ನಸೀರನಬಾನು ರಾಜೇಸಾಬ ನಗಾರ್ಜಿ ನಾಮಪತ್ರ ಸಲ್ಲಿಸಿದ್ದರು. ನಸೀರನಬಾನು ರಾಜೇಸಾಬ ನಗಾರ್ಜಿ ಇವರಿಗೆ 10 ಮತಗಳು ಬಂದಿವೆ. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಶಾಂತವ್ವ ರುದ್ರಪ್ಪ ಕಾಲತಿಪ್ಪಿ ಹಾಗೂ ಕಾಂಗ್ರೆಸ್‍ನ ಆದಿನಾಥ ಜಿನ್ನಪ್ಪ ಸಪ್ತಸಾಗರ ನಾಮಪತ್ರ ಸಲ್ಲಿಸಿದ್ದರು. ಇವರಲ್ಲಿ ಆದಿನಾಥ ಜಿನ್ನಪ್ಪ ಸಪ್ತಸಾಗರ ಇವರಿಗೆ 10 ಮತಗಳಿಂದ ಸೋಲನ್ನು ಅನುಭವಿಸಿದರು. ಪಕ್ಷೇತರರು ಬಿಜೆಪಿಯನ್ನು ಬೆಂಬಲಿಸಿದ್ದರು. ಹಾಗೂ ಶಾಸಕ ಸಿದ್ದು ಸವದಿ ಮತ್ತು ಸಂಸದ ಪಿ.ಸಿ.ಗದ್ದಿಗೌಡರ ಚುನಾವಣೆಯಲ್ಲಿ ಭಾಗವಹಿಸಿ ತಮ್ಮ ಮತವನ್ನು ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ನೀಡಿದರು.
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ಬ ವರ್ಗಕ್ಕೆ ಮೀಸಲಾಗಿತ್ತು. ಬೆಳಿಗ್ಗೆ 10 ರಿಂದ 11ರವರೆಗೆ ನಾಮಪತ್ರ ಸಲ್ಲಿಸಲು ಹಾಗೂ 1ಗಂಟೆಗೆ ಸಭೆ ಪ್ರಾರಂಭಿಸಲಾಯಿತು. ಎಲ್ಲ ನಾಮಪತ್ರಗಳು ಕ್ರಮಬದ್ಧವಾಗಿದ್ದವು. ನಂತರ ಕೈ ಎತ್ತುವ ಮೂಲಕ ಚುನಾವಣೆ ನಡೆಸಲಾಯಿತು.
ಈ ಸಂರ್ದದಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿ ಎರಡು ವರ್ಷದ ನಂತರ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಯಶಸ್ವಿಯಾಗಿ ನಡೆಯಿತು. ಅಧಿಕೃತವಾಗಿ ಬಿಜೆಪಿ ಪಕ್ಷದ ಅನ್ನಪೂರ್ಣ ಸದಾಶಿವ ಹೊಸಮನಿ, ಉಪಾಧ್ಯಕ್ಷರಾಗಿ ಬಿಜೆಪಿಯ ಶಾಂತವ್ವ ರುದ್ರಪ್ಪ ಕಾಲತಿಪ್ಪಿ ಆಯ್ಕೆಯಾಗಿದ್ದಾರೆ. ಆಯ್ಕೆಗೆ ಕಾರಣಿ ಭೂತರಾದ ಬಿಜೆಪಿ ಪಕ್ಷದ ಎಲ್ಲ ಪುರಸಭೆ ಸದಸ್ಯರಿಗೂ ಹಾಗೂ ಶಾಂತ ರೀತಿಯಿಂದ ಸಹಕರಿಸಿದ ವಿರೋಧ ಪಕ್ಷದ ಸದಸ್ಯರಿಗೂ ನಾನು ಹಾಗೂ ಸಂಸದರಾದ ಪಿ.ಸಿ.ಗದ್ದಿಗೌಡರ ಅಭಿನಂದಿಸುತ್ತೇವೆ ಎಂದರು.
ಚುನಾವಣಾಧಿಕಾರಿ ರಬಕವಿ-ಬನಹಟ್ಟಿ ತಹಶೀಲ್ದಾರ ಪ್ರಶಾಂತ ಚನಗೊಂಡ ಕಾರ್ಯನಿರ್ವಹಿಸಿದರು. ತಹಶೀಲ್ದಾರ ಕಚೇರಿ ಸಿರಸ್ಥೇದಾರ ಎಸ್. ಆಯ್. ಸೋಡಿ, ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಪುರಸಭೆ ಸಿಬ್ಬಂದಿಯವರು ಚುನಾವಣಾ ಕೆಲಸದಲ್ಲಿ ಭಾಗವಹಿಸಿದ್ದರು.

Social Plugin