ಮೀಸಲಾತಿ ಹೆಚ್ಚಳವನ್ನು ಬೇಗನೇ ಅನುಮೋದನೆ ಮಾಡಲು ಆಗ್ರಹಿಸಿ ಶಾಸಕ ಸಿದ್ದು ಸವದಿ ಹಾಗೂ ತಹಶೀಲ್ದಾರ ಪ್ರಶಾಂತ ಚನಗೊಂಡ ಅವರಿಗೆ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ರಬಕವಿ-ಬನಹಟ್ಟಿ ತಾಲೂಕು ಘಟಕದ ವತಿಯಿಂದ ಮನವಿ ಅರ್ಪಿಸಲಾಯಿತು.
ಮೀಸಲಾತಿ ಹೆಚ್ಚಳವನ್ನು ಬೇಗನೇ ಅನುಮೋದನೆ ಮಾಡಲು ಆಗ್ರಹಿಸಿ ಮನವಿ
ರಬಕವಿ-ಬನಹಟ್ಟಿ,ಅ1: ಪರಿಶಿಷ್ಟ ಪಂಗಡದವರಿಗೆ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿ ಪ್ರಮಾಣವನ್ನು ಶೇ. 3 ರಿಂದ 7.5ಕ್ಕೆ ಹೆಚ್ಚಳ ಮಾಡುವ ಬಗ್ಗೆ ನ್ಯಾ. ನಾಗಮೋಹನದಾಸ್‍ರ ವರದಿಯನ್ನು ಸಚಿವ ಸಂಪುಟದಲ್ಲಿ ಅನುಮೋದಿಸಿ ಆದೇಶ ಹೊರಡಿಸಲು ಆಗ್ರಹಿಸಿ ರಬಕವಿ-ಬನಹಟ್ಟಿ ತಹಶೀಲ್ದಾರ ಕಛೇರಿ ಮುಂದೆ ಶಾಸಕ ಸಿದ್ದು ಸವದಿ ಹಾಗೂ ತಹಶೀಲ್ದಾರ ಪ್ರಶಾಂತ ಚನಗೊಂಡ ಅವರಿಗೆ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ರಬಕವಿ-ಬನಹಟ್ಟಿ ತಾಲೂಕು ಘಟಕದ ವತಿಯಿಂದ ಮನವಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡ ಎಫ್. ಬಿ. ತಳವಾರ ಮಾತನಾಡಿ, ಈಗಾಗಲೇ ನಿರಂತರವಾಗಿ ಮೀಸಲಾತಿ ಹೆಚ್ಚಳಕ್ಕೆ ಕಳೆದ 3 ವರ್ಷಗಳಿಂದ ಪಾದಯಾತ್ರೆ ಹಾಗೂ ಮನವಿ ಪತ್ರಗಳ ಮೂಲಕ ಕರ್ನಾಟಕ ಸರಕಾರಕ್ಕೆ ಅನೇಕ ಬಾರಿ ವಿನಂತಿಸಿಕೊಂಡರು ಕೇವಲ ಆಸ್ವಾಸನೆ ಮಾತ್ರ ಕೊಡುತ್ತಾ ವಿಳಂಬ ನೀತಿಯನ್ನು ಅನುಸರಿಸುತ್ತಾ ಬಂದಿರುವುದರಿಂದ ಜಗದ್ಗುರು ಪ್ರಸನ್ನಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ದಿ. 21 ರಿಂದ 23 ವರೆಗೆ ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಶಾಂತಿಯುತ ಧರಣಿಯನ್ನು ನಡೆಸಲಾಯಿತು. ಕರ್ನಾಟಕ ಸರಕಾರದ ಮುಖ್ಯ ಮಂತ್ರಿಗಳು ಹಾಗೂ ಸಚಿವರುಗಳು ಒಂದು ತಿಂಗಳ ಹತ್ತು ದಿನಗಳ ಒಳಗಾಗಿ ನಮ್ಮ ಸಮಾಜದ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡಿರುತ್ತಾರೆ. ಆದ್ದರಿಂದ ಸದರಿ ಅವಧಿಯ ಇಳಗಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಈ ಮನವಿ ಮೂಲಕ ಆಗ್ರಹಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿ, ತಮ್ಮ ಮನವಿಯನ್ನು ಸ್ವೀಕರಿಸಿ ಈ ಕುರಿತು ಮುಖ್ಯ ಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ರಮೇಶ ಮೆಳ್ಳಿಗೇರಿ, ಕಾಡಪ್ಪಣ್ಣ ಮಂಟೂರ, ಕಾಶಿರಾಯ ನಾಯಕ, ರಾಮಣ್ಣ ದಳವಾಯಿ, ಸುರೇಶ ವಾಲೀಕಾರ, ಪರಸಪ್ಪ ನಾಯಕ, ರಮೇಶ ನಾಯಕ, ಲಕ್ಕಪ್ಪ ಸಂತಿ, ಸಂತೋಷ ದಂಡಿಮನಿ, ಮಲ್ಲಪ್ಪ ಕಂಬಳಿ, ಅನಿಲ ಬುರುಡ, ಬಸವರಾಜ ಬೈಯಾರ, ಪರಪ್ಪ ಅಮಾತ್ಯನವರ, ಶಿವಕುಮಾರ ಕುಳ್ಳೊಳ್ಳಿ, ಪರಪ್ಪ ಅಮಾತ್ಯನವರ, ಪರಸಪ್ಪ ನಾಯಕ, ಮಲ್ಲಪ್ಪ ಜಕ್ಕನೂರ ಸೇರಿದಂತೆ ಅನೇಕರು ಇದ್ದರು.

Social Plugin