ತೇರದಾಳದ ಬಸ್ ನಿಲ್ದಾಣದ ಹತ್ತಿರವಿರುವ ಪಿಕೆಪಿಎಸ್ ಹತ್ತಿರ ರಸ್ತೆಯ ಮೇಲೆ ಅವೈಜ್ಞಾಣಿಕ ಚರಂಡಿ ನಿರ್ಮಾಣ.


ರಸ್ತೆಯ ಮೇಲೆ ಅವೈಜ್ಞಾಣಿಕ ಚರಂಡಿ ನಿರ್ಮಾಣ- ಸಾರ್ವಜನಿಕರಿಂದ ಖಂಡನೆ 

ತೇರದಾಳ : ಪಟ್ಟಣದ ಬಸ್ ನಿಲ್ದಾಣ ಹತ್ತಿರವಿರುವ ಪಿಕೆಪಿಎಸ್ ಹತ್ತಿರ ನೀರು ಹೋಗಲು ಚರಂಡಿಯನ್ನು ನಿರ್ಮಿಸಿದ್ದಾರೆ. ಅದು ಭೂಮಿಯ ಸಮತಳದಲ್ಲಿರದೇ ಭೂಮಿಯ ಮೇಲ್ಭಾಗದಲ್ಲಿದೆ. ಯಾವಾಗಲೂ ಚರಂಇಡಿ ನಿರ್ಮಿಸುವುದು ಭೂಮಿಯ ಸಮಪಾತಳಿಯಲ್ಲಿ. ನೀರು ಚರಂಡಿಯಲ್ಲಿ ಹರಿದು ಹೋಗಲಿ ಎಂದು ಚರಂಡಿ ನಿರ್ಮಿಸುತ್ತಾರೆ. ಆದರೆ ಇಲ್ಲಿ ಪುರಸಭೆಯವರು ರಸ್ತೆಯ ಮೇಲೆ ಚರಂಡಿ ನಿರ್ಮಿಸಿ ನಗೆಪಾಟಲಾಗಿದೆ.


     ರಸ್ತೆಯ ಮೇಲೆ ಚರಂಡಿ ನಿರ್ಮಾಣ ಮಾಡಿದರೆ ನೀರು ರಸ್ತೆಯಿಂದ ಜಾರಿ ಚರಂಡಿಗೆ ಹೋಗುವುದು ಹೇಗೆ. ಇದು ಪುರಸಭೆ ಜೆಇ ಗಳಿಗೆ ಏಕೆ ತಿಳಿದಿಲ್ಲವೆಂಬುವುದು ಸಾರ್ವಜನಿಕರ ಪ್ರಶ್ನೆ. ಚಿಕ್ಕ ಮಕ್ಕಳಿಗೆ ತಿಳಿಯುತ್ತದೆ ನೀರು ಇಳಿಜಾರಿನ ಕಡೆಗೆ ಹೋಗುತ್ತದೆ ಹಾಗೂ ನೀರು ಮೇಲಿನಿಂದ ಕೆಳಕ್ಕೆ ಹರಿಯುತ್ತದೆ ಆದರೆ ಇದು ಯಾವ ದೇಶದ ವೈಜ್ಞಾನಿಕ ನಕ್ಷೆ ಗೊತ್ತಿಲ್ಲ. ರಸ್ತೆಯ ಮೇಲೆ ಬಿದ್ದ ನೀರು ಚರಂಡಿಯೊಳಗೆ ಹೇಗೆ ಹೋಗುವುದು ಇದು ಸಾರ್ವಜನಿಕರಿಗೆ ಕಾಡುತ್ತಿರುವ ಪ್ರಶ್ನೆ. ಹಾಗೂ ಇದರಿಂದ ತಿಳಿಯುತ್ತದೆ ಸರಕಾರದ ಹಣ ಯಾವ ರೀತಿ ಖರ್ಚಾಗುತ್ತದೆ. ಹಾಗೂ ಹೇಗೆ ಖರ್ಚು ಮಾಡಬೇಕು ಎಂಬುವುದನ್ನು ಪುರಸಭೆ ಅಧಿಕಾರಿಗಳು ಈ ರಸ್ತೆಯ ಮೇಲೆ ನಿರ್ಮಿಸಿದ ವಿಶೇಷ ಚರಂಡಿ ನಿರ್ಮಾಣದಿಂದ ತಿಳಿಯಬಹುದು. 

  ಪುರಸಭೆಯವರ ಈ ಕಾರ್ಯಕ್ಕೆ ಬಸವರಾಜ ಬಾಳಿಕಾಯಿ, ರೇವಣೇಶ ಹಿರೇಮಠ, ಮಲ್ಲಪ್ಪ ಕೌಜಲಗಿ ಸೇರಿದಂತೆ ಇನ್ನಿತರರು ಪುರಸಭೆಯ ಈ ಕಾರ್ಯವನ್ನು ಖಂಡಿಸಿದ್ದಾರೆ.