ರಬಕವಿ ಕನ್ನಡ ರಾಜ್ಯೋತ್ಸವ ಸಮೀತಿ ಆಶ್ರಯದಲ್ಲಿ ನಗರದ ಶಂಕರಲಿಂಗ ದೇವಸ್ಥಾನ ಆವರಣದಲ್ಲಿ ಕನ್ನಡಾಂಬೆ ಭಾವ ಚಿತ್ರಕ್ಕೆ ಶಾಸಕ ಸಿದ್ದು ಸವದಿ ಪೂಜೆ ಸಲ್ಲಿಸಿದರು. ಶಿವಾನಂದ ಭಾಗಲಕೋಠಮಠ. ಚಿದಾನಂದ ಸೊಪ್ಪಾಪುರ, ಬಾಬು ಗಂಗಾವತಿ, ತಹಸೀಲ್ದಾರ ಪ್ರಶಾಂತ ಚನಗೊಂಡ  ಇದ್ದರು.
ಪವಿತ್ರ ಹಾಗೂ ಪ್ರಾಚೀನ ಭಾಷೆ ಕನ್ನಡ
ರಬಕವಿ-ಬನಹಟ್ಟಿ,ಅ1: ಕನ್ನಡವನ್ನು ಕಡ್ಡಾಯವಾಗಿ ಎಲ್ಲರೂ ಬಳಸಬೇಕು. ಪವಿತ್ರ ಹಾಗೂ ಅತ್ಯಂತ ಪ್ರಾಚೀನ ಭಾಷೆ ಕನ್ನಡವಾಗಿದೆ. ಕನ್ನಡ ಉಳಿಸಿ ಉಳಿಸಿ ಎಂದು ಹೇಳುವುದಕ್ಕಿಂತ ಅದನ್ನು ಎಲ್ಲರೂ ಬಳಸೋಣ ಅದು ತಾನಾಗಿಯೇ ಉಳಿದು ಬೆಳೆಯುತ್ತದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ರಬಕವಿಯ ವಿರಕ್ತ ಮಠದಲ್ಲಿ ಹಮ್ಮಿಕೊಂಡ 65ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡಾಂಭೆ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಇಂದು ತಂತ್ರಜ್ಞಾನ ದಿನೆ ದಿನೆ ಬೆಳೆಯುತ್ತಿದೆ. ಸಮಾಜಿಕ ಜಾಲತಾಣಗಳಲ್ಲಿ ಕನ್ನಡವನ್ನು ಹೆಚ್ಚು ಹೆಚ್ಚು ಬಳಸಿ ಅದರ ಕೀರ್ತಿ ಹೆಚ್ಚಿಸಲು ನಾವೆಲ್ಲರೂ ಸನ್ನದ್ದರಾಗೋಣ. ಸರ್ಕಾರಿ ಎಲ್ಲ ಕಚೇರಿಗಳಲ್ಲಿ ಕನ್ನಡ ಕಡ್ಡಾಯಬಾಗಬೇಕು ಎನ್ನುವುದಕ್ಕೆ ನಾನೂ ಪ್ರಾಮಾಣಿಕವಾಗಿ ವಿಧಾನಸಭೆಯಲ್ಲಿ ಹೋರಾಟ ಮಾಡುತ್ತೇನೆ ಎಂದರು.
ಇದೇ ಸಮಾರ್ಭದಲ್ಲಿ ಹಿರಿಯ ಸಾಹಿತಿ, ಅರ್ಥಶಾಸ್ತ್ರ ತಜ್ಞ ಪ್ರೊ. ಎಂ. ಎಸ್. ಬದಾಮಿ ಮಾತನಾಡಿ, ಒಬ್ಬರಿಗೊಬ್ಬರು ವಿಚಾರ ವಿನಿಮಯ ಮಾಡಿಕೊಳ್ಳಲು ಅನುಕೂಲವಾಗಿರುವ ಸಾಧನವೆ ಭಾಷೆಯಾಗಿದೆ. ಅದರಲ್ಲೂ ಕನ್ನಡ ಭಾಷೆಯನ್ನು ಸಂಪೂರ್ಣ ಬಲ್ಲವನಿಗೆ ಬೇರೆ ಭಾಷೆಗಳ ಜ್ಞಾನ ಬೇಗ ಅರಿವಾಗುತ್ತದೆ. ಸರ್ಕಾರಗಳು ಕೂಡಾ ರಾಜ್ಯದ ಎಲ್ಲ ಇಲಾಖೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸುವಂತೆ ಆದೇಶ ಮಾಡಬೇಕು. ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಆತಂಕದ ಛಾಯೇ ಎದಿರಾಗುವ ಸಾಧ್ಯತೆಗಳಿವೆ. ನಾವು ಕನ್ನಡಿಗರು ಅದನ್ನು ಉಳಿಸಲು ನೀರಂತರ ಬಳಸುತ್ತಾ ಕೆಚ್ಚೆದೆಯಿಂದ ಹೋರಾಡಲೇ ಬೇಕು. ಅಂದಾಗ ಮಾತ್ರ ಕನ್ನಡಕ್ಕೆ ಯಾವುದೇ ತೊಂದರೆ ಬರದೆ ಅದು ಚೀರಕಾಲು ಉಳಿದು ಬೆಳೆಯುತ್ತದೆ ಎಂದರು.
ಕನ್ನಡಾಭಿಮಾನಿಗಳಾದ ತಹಸೀಲ್ದಾರ ಪ್ರಶಾಂತ ಚನಗೊಂಡ, ಡಾ. ಪದ್ಮಜೀತ ನಾಡಗೌಡಪಾಟೀಲ, ಡಾ. ರವಿ ಜಮಖಂಡಿ, ತಾಲೂಕಿನ ತಾಪಂ ಅಧಿಕಾರಿ ಸಂಜು ಹಿಪ್ಪರಗಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮ ಸಂಘಟಿಕ ಚಿದಾನಂದ ಸೊಲ್ಲಾಪುರ, ಎಂ. ಬಿ. ನಾಶಿ, ಶ್ರೀಶೈಲ ಬುಯ್ಯಾರ, ಸಿದ್ದಪ್ಪ ಮೇಣಿ, ಶೇಖರ ಕೊಟ್ರಶೆಟ್ಟಿ, ಮಹಾದೇವ ಕೋಟ್ಯಾಳ, ಡಾ. ಜಿ. ಎಚ್. ಚಿತ್ತರಗಿ, ಶಿವಾನಂದ ಬಾಗಲಕೋಟಮಠ, ಧರೆಪ್ಪ ಉಳ್ಳಾಗಡ್ಡಿ, ಮಹಾದೇವ ದುಪದಾಳ, ಸಿದ್ದಪ್ಪ ಮೇಣಿ, ಚಿದಾನಂದ ಗಾಳಿ, ಬಾಬು ಕೆಳಗಿನಮನಿ ಸೇರಿದಂತೆ ಅನೇಕರಿದ್ದರು.
ಎಂ. ಎಸ್. ಗಡೆನ್ನವರ ನಿರೂಪಿಸಿದರು. ಚಿದಾನಂದ ಸೊಲ್ಲಾಪರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮರ್ಥ ಗಡೆನ್ನವರ ಹಾಗೂ ಬಾಬು ಗಂಗಾವತಿ ಕನ್ನಡ ಗೀತೆಗಳನ್ನು ಹಾಡಿದರು. ಸುಭಾಸ ಮಧುರಖಂಡಿ ವಂದಿಸಿದರು.