ತೇರದಾಳ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ರಬಕವಿಯಲ್ಲಿ ಮಾಜಿ ಸಚಿವೆ ಉಮಾಶ್ರೀ ಮನೆಯಲ್ಲಿ ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸಿರುವ ತೇರದಾಳ ಠಾಣೆಯ ಪೋಲಿಸ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ.
ಮಾಜಿ ಸಚಿವೆ ಉಮಾಶ್ರೀ ಮನೆ ಕಳ್ಳತನ ಮಾಡಿದ ಆರೋಪಿಗಳ ಬಂಧನ
ತೇರದಾಳ : ಇದೇ ನ.1ರಂದು ರಬಕವಿ ಪಟ್ಟಣದಲ್ಲಿರುವ ಮಾಜಿ ಸಚಿವರ ಮನೆಯಲ್ಲಿ 2ಲಕ್ಷ ರೂ.ಕಳ್ಳತನ ಮಾಡಿರುವ ಆರೋಪಿಗಳನ್ನು ಬಂಧಿಸುವಲ್ಲಿ ತೇರದಾಳ ಪೋಲಿಸ್ ಠಾಣೆಯ ಠಾಣಾಧಿಕಾರಿ ಹಾಗೂ ಸಿಬ್ಬಂದಿಯವರು ಯಶಸ್ವಿಯಾಗಿದ್ದಾರೆ.
ಕಳ್ಳತನವಾದ ಬಗ್ಗೆ ಶ್ರೀಮತಿ ಉಮಾಶ್ರೀ ಯವರು ನ.2ರಂದು ತೇರದಾಳ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಇಲಾಖೆ ಶ್ವಾನ ದಳವನ್ನು ಸ್ಥಳಕ್ಕೆ ಕರೆಯಿಸಿ ಪತ್ತೇ ಕಾರ್ಯ ನಡೆಸಿದರಲ್ಲದೆ ಬೆರಳು ಮುದ್ರೆ ತಜ್ಞರ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಜಮಖಂಡಿ ಪೋಲಿಸ್ ಉಪವಿಭಾಗಾಧಿಕಾರಿ ಎಮ್.ಪಾಂಡುರಂಗಯ್ಯ ಇವರು ಸಹ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ತನಿಖಾಧಿಕಾರಿಗಳಿಗೆ ಸೂಕ್ತ ಸಲಹೆ ನೀಡಿದ್ದರು.
ಬಾಗಲಕೋಟ ಜಿಲ್ಲಾ ಪೋಲಿಸ್ ಅಧೀಕ್ಷಕರಾದ ಲೋಕೇಶ ಜಗಲಾಸರ ಇವರ ಮಾರ್ಗದರ್ಶನದಲ್ಲಿ ಸಿಪಿಐ ಜೆ.ಕರುಣೇಶಗೌಡ ಹಾಗೂ ಸ್ಥಳಿಯ ಪಿಎಸ್‍ಐ ವಿಜಯ ಕಾಂಬಳೆ ಇವರ ನೇತೃತ್ವದ ತಂಡ ಕಾರ್ಯಾಚರಣೆ ಮಾಡಿ ಜಮಖಂಡಿಯ ಯಲ್ಲಪ್ಪ ರಾಮಾಚಾರಿ ಹಾಗೂ ಮುಧೋಳದ ದುರ್ಗಪ್ಪ ಫಕೀರಪ್ಪ ವಾಲ್ಮಿಕಿ ಇವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಕಳ್ಳತನವಾಗಿದ್ದ 1,94000 ರೂಪಾಯಿಗಳನ್ನು ವಶಪಡಿಕೊಂಡಿದ್ದಾರೆ.
ಆರೋಪಿ ಯಲ್ಲಪ್ಪ ರಾಮಾಚಾರಿ ಇತನು ಈ ಹಿಂದೆ ಬಾಗಲಕೋಟ ನವನಗರ, ಬೀಳಗಿ, ಬೆಳಗಾವಿಯ ಮಾಳಮಾರುತಿ, ಚಿಕ್ಕೋಡಿ ಮುಂತಾದ ಕಡೆಗಳಲ್ಲಿ ಕಳ್ಳತನಮಾಡಿ ಜೈಲು ಶಿಕ್ಷೆಗೆ ಗುರಿಯಾಗಿ ಅಂತರ ಜಿಲ್ಲಾ ಆರೋಪಿಯಾಗಿದ್ದು ಇತ್ತೀಚಿಗೆ ವಿಜಯಪೂರ ಕಾರಾಗ್ರಹದಿಂದ ಕಳೆದ ಅ.23ರಂದು ಬಿಡುಗಡೆಯಾಗಿದ್ದನು. ಆರೋಪಿ ದುರ್ಗಪ್ಪ ಫಕೀರಪ್ಪ ವಾಲ್ಮಿಕಿ ಇವನು ಸಹ ಮುಧೋಳ ಪೋಲಸ್ ಠಾಣೆಯಲ್ಲಿ ಕಳ್ಳತನ ಪ್ರಕರಣದಲ್ಲಿ ಆರೋಪಿತನಾಗಿದ್ದು ಜಾಮೀನು ಪಡೆದುಕೊಂಡು ಬಂದು ವಿಚಾರಣೆ ಎದುರಿಸುತ್ತಿರುವ ಆರೋಪಿಯಾಗಿದ್ದಾನೆಂದು ತಿಳಿದುಬಂದಿದೆ.
ಇಬ್ಬರೂ ರೂಢಿಗತ ಕಳರನ್ನು ಬಂಧಿಸಿದ ಕಾರ್ಯಾಚರಣೆಯಲ್ಲಿ ತೇರದಾಳದ ಎಎಸ್‍ಐ ಹೆಚ್.ಎಸ್.ಮೆಂಡೆಗಾರ, ಎಸ್.ಕೆ.ಸೂರ್ಯವಂಶಿ, ಪಿ.ಬಿ.ಪೂಜಾರಿ, ಕೆ.ಎಚ್.ಸನಹಟ್ಟಿ, ಸಿ.ಎಮ್.ಬಢೇಘರ, ಬಿ.ಎಸ್.ಚೌಲಗಿ, ಆರ್.ಎಸ್.ದೇಸಾಯಿ, ವಾಯ್,ಜಿ. ಭಜಂತ್ರಿ, ಆರ್.ವಾಯ್.ಪೂಜಾರಿ, ಎ.ಎ.ಕೋಲೂರ, ಎಮ್.ಎಲ್. ಬುಗಟಿ, ಎಮ್.ಆರ್. ಕೆಂಚನ್ನವರ, ಎಸ್.ಬಿ.ಬೇವನೂರ, ವ್ಹಿ.ಎನ್.ಸುವರ್ಣಖಂಡಿ, ಎಸ್.ಪಿ.ಹುಕ್ಕೇರಿ, ಬನಹಟ್ಟಿ ಠಾಣೆಯ ಎಎಸ್‍ಐ ಸೈಫಾನ ನಾಟೀಕರ, ವ್ಹಿ.ಎಸ್.ಅಜ್ಜನಗೌಡ್ರ, ಎ.ಎಮ್. ಜಮಖಂಡಿ ಭಾಗವಹಿಸಿದ್ದರು. ಪೋಲಿಸರ ಯಶಸ್ವಿ ಕಾರ್ಯಾಚರಣೆಗೆ ಬಾಗಲಕೋಟ ಜಿಲ್ಲಾ ಎಸ್‍ಪಿ ಲೋಕೇಶ ಜಗಲಾಸರ ಪ್ರಶಂಸಿಸಿದ್ದಾರೆ.

Social Plugin