ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಭಾರತ ನಿರ್ಮಾಣ ರಾಜೀವ ಗಾಂಧಿ ಸೇವಾ ಕೇಂದ್ರದ 28.60 ಲಕ್ಷ ವೆಚ್ಚದ ಕಟ್ಟಡ ಕಾಮಗಾರಿಯ ಭೂಮಿ ಪೂಜೆ ನೆರವೆರಿಸಿದ ಶಾಸಕ ಸಿದ್ದು ಸವದಿ 

ಭಾರತ ನಿರ್ಮಾಣ ರಾಜೀವ ಗಾಂಧಿ ಸೇವಾ ಕೇಂದ್ರ ನಿರ್ಮಾಣಕ್ಕೆ ಭೂಮಿ ಪೂಜೆ 
ರಬಕವಿ-ಬನಹಟ್ಟಿ,ನ19: ತಾಲೂಕಿನ ನಾವಲಗಿಯಲ್ಲಿ ರೂ. 28.60 ಲಕ್ಷ ವೆಚ್ಚದಲ್ಲಿ ಭಾರತ ನಿರ್ಮಾಣ ರಾಜೀವ ಗಾಂಧಿ ಸೇವಾ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಅವರು ತಾಲೂಕಿನ ನಾವಲಗಿಯಲ್ಲಿ ಜಿಲ್ಲಾ ಪಂಚಾಯತ ಬಾಗಲಕೋಟ, ತಾಲೂಕು ಪಂಚಾಯತ ರಬಕವಿ-ಬನಹಟ್ಟಿ , ಗ್ರಾಮಪಂಚಯತ ನಾವಲಗಿ ವತಿಯಿಂದ ಸನ್ 2020-21ನೇ ಸಾಲಿನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಭಾರತ ನಿರ್ಮಾಣ ರಾಜೀವ ಗಾಂಧಿ ಸೇವಾ ಕೇಂದ್ರದ 28.60 ಲಕ್ಷ ವೆಚ್ಚದ ಕಟ್ಟಡ ಕಾಮಗಾರಿಯ ಭೂಮಿ ಪೂಜೆ ನೆರವೆರಿಸಿ ಮಾತನಾಡಿದರು. 
ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಹಲವಾರು ಯೋಜನೆಗಳಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ ನಿರ್ಮಿಸಲಾಗುತ್ತಿರುವ ಸೇವಾ ಕೇಂದ್ರದ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು. 
ಈ ಸಂದರ್ಭದಲ್ಲಿ ತಾ. ಪಂ. ಮುಖ್ಯ ಕಾರ್ಯನಿರ್ವಾಹನಾಧಿಕಾರಿ ಸಂಜಯ ಹಿಪ್ಪರಗಿ, ಲೋಕೋಪಯೋಗಿ ಇಲಾಖೆಯ ಗಾಯಕವಾಡ, ಆನಂದ ಕಂಪು, ಜಿ. ಪಂ. ಸದಸ್ಯ ಪುಂಡಲಿಕ ಪಾಲಬಾಂವಿ, ಪಿಡಿಓ ಶಿವಯ್ಯ ಮಠಪತಿ, ತಾ. ಪಂ. ಸದಸ್ಯ ಗುರು ಮರಡಿಮಠ, ಗೋವಿಂದ ಪಾಟೀಲ, ಮುತ್ತಪ್ಪ ಅಂಗಡಿ, ಈರಪ್ಪ ಬಾಗಿ, ಹನಮಂತ ಸವದಿ, ಮಲ್ಲಪ್ಪ ಗಣಿ, ಲಕ್ಷ್ಮಣ ಸವದಿ, ಸಿದ್ದು ಲೆಂಡಿ, ಸಂಗಣ್ಣ ಹಳ್ಳಿ, ಈರಪ್ಪ ಶಿರೋಳ ಸೇರಿದಂತೆ ಅನೇಕರು