ತೇರದಾಳದ ಜಿಲ್ಲಾ ನೇಕಾರ ಪತ್ತಿನ ಸಹಕಾರಿ ಸಂಘದ ಸ್ಥಳೀಯ ಶಾಖೆಯಲ್ಲಿ ಸೋಮವಾರ ನೇಕಾರರಿಗೆ ಶೇ. 1ರ ಬಡ್ಡಿ ದರದಲ್ಲಿ ಸಾಲದ ಚಕ್‍ನ್ನು ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಸಿದ್ದು ಸವದಿ ವಿತರಿಸಿದರು.
ವರದಿ : ವಿಜಯ ವಾಜಂತ್ರಿ
ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಲು ನೇಕಾರರಿಗೆ ಕಿವಿ ಮಾತು
ತೇರದಾಳ : ನೇಕಾರರು ಆರ್ಥಿಕವಾಗಿ ಸಧೃಡರಾಗಲು ಸರಕಾರ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಸಿದ್ದು ಸವದಿ ಹೇಳಿದರು.
ಪಟ್ಟಣದಲ್ಲಿ ಜಿಲ್ಲಾ ನೇಕಾರ ಪತ್ತಿನ ಸಹಕಾರಿ ಸಂಘದ ಸ್ಥಳೀಯ ಶಾಖೆಯಲ್ಲಿ ಸೋಮವಾರ ನೇಕಾರರಿಗೆ ಶೇ. 1ರ ಬಡ್ಡಿ ದರದಲ್ಲಿ ಸಾಲದ ಚಕ್‍ನ್ನು ವಿತರಿಸಿ ಮಾತನಾಡಿದ ಅವರು ರೈತ ಹಾಗೂ ನೇಕಾರರು ನಮ್ಮ ಎರಡು ಕಣ್ಣುಗಳಿದ್ದಂತೆ ಎಂದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಗೊಂಡ ಹಿನ್ನಲೆಯಲ್ಲಿ ಶಾಸಕ ಸಿದ್ದು ಸವದಿಯವರನ್ನು ಬ್ಯಾಂಕ್ ಸ್ಥಳೀಯ ಆಡಳಿತ ಮಂಡಳಿಯವರು ಹಾಗೂ ಸಿಬ್ಬಂದಿಯವರು ಸತ್ಕರಿಸಲಾಯಿತು.
Social Plugin