ನಾಳೆಯಿಂದ ವೈದ್ಯರಿಂದ ಕ್ರಿಕೆಟ್ ಪಂದ್ಯಾವಳಿ
ರಬಕವಿ-ಬನಹಟ್ಟಿ,ನ21: ನಗರದ ಎಸ್‍ಆರ್‍ಎ ಮೈದಾನದಲ್ಲಿ ರಬಕವಿ-ಬನಹಟ್ಟಿ, ತೇರದಾಳ ವೈದ್ಯರು ಹಾಗು ಫ್ರೀಡಂ ಬಾಯ್ಸ್ ಕ್ರಿಕೆಟ್ ಕ್ಲಬ್ ವತಿಯಿಂದ ನಾಳೆ ಸೋಮವಾರ ದಿ.23 ರಿಂದ ದಿ.29 ರವರೆಗೆ ಕರ್ನಾಟಕ ಹಾಗು ಮಹಾರಾಷ್ಟ್ರ ರಾಜ್ಯಗಳ ವಿವಿಧ ನಗರದ ಕ್ರಿಕೆಟ್ ತಂಡಗಳಿಂದ `ಕೊರೊನಾ ವಾರಿಯರ್ಸ್ ಕಪ್’ ಜರುಗಲಿದೆ ಎಂದು ಡಾ. ಪ್ರಭು ಪಾಟೀಲ ತಿಳಿಸಿದರು.
ಪ್ರಥಮ ಸ್ಥಾನ 1 ಲಕ್ಷ, ದ್ವಿತೀಯ ಸ್ಥಾನ 50 ಸಾವಿರ, ಸರಣಿ ಶ್ರೇಷ್ಠ ಆಟಗಾರನಿಗೆ ಎಲ್‍ಇಡಿ ಟಿವಿ, ಉತ್ತಮ ಬ್ಯಾಟ್ಸ್‍ಮನ್ ಹಾಗು ಬೌಲರ್‍ಗೆ ತಲಾ ಸ್ಮಾರ್ಟ್ ಫೋನ್, ಪ್ರತಿಯೊಂದು ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಆಟಗಾರನಿಗೆ ಬಹುಮಾನಗಳಿವೆ.
ತಂಡಗಳ ಹೆಸರು ನೊಂದಾಯಿಸಲು ನ.23 ಸೋಮವಾರ ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗೆ 95911-80313/77957-22178/96867-35902 ನಂಬರ್‍ಗಳನ್ನು ಸಂಪರ್ಕಿಸಬಹುದು.

Social Plugin