ಬನಹಟ್ಟಿಯಲ್ಲಿ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೆ ನಿಮಿತ್ತ ಸಾಂಕೇತಿಕವಾಗಿ ಕುಸ್ತಿ ಜರುಗಿದವು.

ಗಮನ ಸೆಳೆದ ಜಂಗಿ ನಿಕಾಲಿ ಕುಸ್ತಿಗಳು
*ಮಲ್ಲಿಕಾರ್ಜುನ ಜಾತ್ರೆ ನಿಮಿತ್ತ ಸಾಂಕೇತಿಕ ಕುಸ್ತಿ
ರಬಕವಿ-ಬನಹಟ್ಟಿ,ನ19: ಬನಹಟ್ಟಿಯ ಶ್ರೀ ಮಲ್ಲಿಕಾರ್ಜುನ ಜಾತ್ರೆ ನಿಮಿತ್ತ ಕೊರೊನಾ ಕಾರಣ ಈ ಬಾರಿ ನಿಯಮಕ್ಕೆ ಮಾತ್ರ ನಾಲ್ಕೈದು ಜಗಜಟ್ಟಿಗಳ ನಡುವೆ ಅದ್ಧೂರಿ ಜಂಗಿ ನಿಕಾಲಿ ಕುಸ್ತಿಗಳು ಜರುಗಿದವು.
ಸಂಜೆ 4ಕ್ಕೆ ಬನಹಟ್ಟಿಯ ಹಿರಿಯರಾದ ಕಾಡಪ್ಪ ಜಿಡ್ಡಿಮನಿ ಕುಸ್ತಿ ಮೈದಾನಕ್ಕೆ ಪೂಜೆ ಸಲ್ಲಿಸಿದರು. ನಗರಸಭಾಧ್ಯಕ್ಷ ಶ್ರೀಶೈಲ ಬೀಳಗಿ, ಪ್ರಭಾಕರ ಮೊಳೇದ, ಸದಾಶಿವ ಪರೀಠ ಕುಸ್ತಿಗೆ ಚಾಲನೆ ನೀಡಿದರು.
ಮಲ್ಲಣ್ಣ ಬಾವಲತ್ತಿ, ಮಹಾಶಾಂತ ಶೆಟ್ಟಿ, ಶಿವಾನಂದ ಬಾಗೇವಾಡಿ, ಮಲ್ಲಣ್ಣ ಕಕಮರಿ, ಪ್ರ್ರಶಾಂತ ಕೊಳಕಿ, ಬಾಳು ಬಾಣಕಾರ(ಗಣೇಶನವರ), ಮಲ್ಲಿಕಾರ್ಜುನ ಬಾವಲತ್ತಿ, ಚನ್ನಪ್ಪ ಗುಣಕಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.