ವರದಿ : ಕೆ. ಎಸ್. ರಂಗಸ್ವಾಮಿ 
ಶೂದ್ರರು ಎಂದಾಕ್ಷಣ ಸಾಮಾನ್ಯವಾಗಿ ನಮಗೆ ನೆನಪಿಗೆ ಬರುವುದೇನೆಂದರೆ ಎಸ್ .ಸಿ. ಜನ. ಆದರೆ ಅದರ ವಾಸ್ತವತೆಯೇ ಬೇರೆ ಇದೆ. ವಾಸ್ತವತೆಯನ್ನು ಮುಚ್ಚಿಟ್ಟು ನಾವೆಲ್ಲ ಬೇರೆ ರೀತಿಯಲ್ಲಿ ಬದುಕನ್ನು ನಡೆಸುತ್ತಿದ್ದೇವೆ. ಸತ್ಯವನ್ನು ಮರೆಮಾಚಿದ್ದೇವೆ ಹೀಗಾಗಿ ನಿಜವಾದ ಶೂದ್ರರು ಯಾರು ಎಂಬ ಸತ್ಯವನ್ನು ಬಹಿರಂಗ ಗೊಳಿಸಬೇಕಾಗಿದೆ. ಈ ಶೂದ್ರ ಹಾಗೂ ಅಸ್ಪೃಶ್ಯರು ಎಂಬ ಪದಗಳ ನಡುವಿನ ಅಂತರವನ್ನು  ನಾವೆಲ್ಲ ತಿಳಿಯಬೇಕಾಗಿದೆ. ಹೀಗಾಗಿ ಮಹಾಮಾನವತಾವಾದಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶೂದ್ರ ಎಂಬ ವಿಷಯಕ್ಕೆ ಸಂಬಂಧಪಟ್ಟಂತೆ ಬೃಹತ್ ಗ್ರಂಥವನ್ನೇ ರಚಿಸಿದ್ದಾರೆ. ಹೀಗಾಗಿ ಈ ಗ್ರಂಥದ ಇತಿಹಾಸವನ್ನು ಪ್ರತಿಯೊಬ್ಬರು  ತಿಳಿಯಬೇಕಾಗಿದೆ. ಈ ನಾಡಿನಲ್ಲಿರುವ ಪ್ರತಿಯೊಬ್ಬರು ಈ ವಿಷಯವನ್ನು  ಅರಿತುಕೊಳ್ಳಬೇಕಾಗಿದೆ ಈ ವಿಷಯವು ಪ್ರತಿಯೊಬ್ಬರಿಗೂ  ಮುಟ್ಟಲಿ ಎನ್ನುವ ಸದುದ್ದೇಶದಿಂದ ಬಾಬಾಸಾಹೇಬರು ಇಂಗ್ಲೀಷಿನಲ್ಲಿ  ಬರೆದಿರುವಂತಹ  ಆ ಸಾವಿರಾರು ಪುಟದ ಗ್ರಂಥದ ಆಧಾರದ ಮೇಲೆ ತಮ್ಮೆಲ್ಲರಿಗೂ ಅನುಕೂಲವಾಗಲಿ ಓದಲು ಸುಲಭವಾಗಲಿ ಎನ್ನುವ ದೃಷ್ಟಿಯಿಂದ ಅದನ್ನು ಕನ್ನಡದಲ್ಲಿ ಅನುವಾದಿಸಿ  "ಶೂದ್ರರು ಯಾರು ?"ಎಂಬ ಶೀರ್ಷಿಕೆಯಡಿ ಪುಸ್ತಕವನ್ನು ಹೊರತರಲಾಗುವುದು.ಅದರೊಂದಿಗೆ "ಪ್ರಭುದ್ವ ನಾಯಕತ್ವದ ಪತಧರ್ಮ ಸೂತ್ರಗಳು ಮತ್ತು ಕೋರೆಗಾವ್ ಹೋರಾಟ ಹೀಗೆ ಒಟ್ಟು ಮೂರು ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗುವುದು ಎಂದು ಮಹಾತ್ಮ ಜ್ಯೋತಿಬಾ ಫುಲೆಯವರ ಸತ್ಯಶೋಧಕ ಸಂಘದ ರಾಜ್ಯಾಧ್ಯಕ್ಷರಾದ ಮಹಾರಾಜನವರ ತಿಳಿಸಿದರು.
ಪಟ್ಟಣದ ಡಾ: ಬಿ.ಆರ್ ಅಂಬೇಡ್ಕರ್  ಭವನದ ಆವರಣದಲ್ಲಿ ಪುಸ್ತಕಗಳ ಬಿಡುಗಡೆಯ ಕುರಿತು ಕೈಕೊಂಡ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಶೂದ್ರರು ಯಾರು ಎಂಬ ಕೃತಿಯು ಆಧುನಿಕ ಭಾರತಕ್ಕೆ ನೀಡಿರುವ ಸ್ಮರಣೀಯ ಕೃತಿಯಾಗಿದೆ. ಈ ಶೂದ್ರ ಯಾರು ಹಾಗೂ ಅಸ್ಪೃಶ್ಯರು ಯಾರು ಎಂಬ ಎರಡು ಕೃತಿಗಳು ಇಪ್ಪತ್ತನೆಯ ಶತಮಾನದಲ್ಲಿ ವ್ಯಕ್ತಿಗೆ ಸಮಾನತೆ ಹಾಗೂ ಸ್ವಾತಂತ್ರ್ಯ ಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ಬಲವಾಗಿ ಬಿಗಿದಿಟ್ಟಿರುವ ಮತ್ತು ಸದಾ ನಿಯಂತ್ರಿಸುತ್ತಿರುವ ಜಾತಿಪದ್ಧತಿಯನ್ನು ಕುರಿತು  ವಿಮರ್ಶೆಯನ್ನು ಇಲ್ಲಿ ಕಾಣಬಹುದು. ಶೂದ್ರರು ಯಾರು, ಅವರ ಉಗಮ ಅವರ ಸ್ಥಾನಮಾನದ ಬಗ್ಗೆ ಬ್ರಾಹ್ಮಣವಾದ, ವರ್ಣವ್ಯವಸ್ಥೆ, ಬ್ರಾಹ್ಮಣರು ಮತ್ತು ಶೂದ್ರರು ಹಿಂದೂಗಳಲ್ಲಿ ಮತ್ತು  ಹಿಂದೂಗಳಲ್ಲದವರಲ್ಲಿ ಅಸ್ಪೃಶ್ಯತೆ , ಅಸ್ಪೃಶ್ಯರ ಉಗಮ, ಆಧಾರ ಸಿದ್ಧಾಂತಗಳು ಅವರ ಸಮಸ್ಯೆ ಹೇಗೆ ಸಾಕಷ್ಟು ವಿಷಯಗಳ ಕುರಿತು ಸ್ಪಷ್ಟತೆಯನ್ನು ಈ ಪುಸ್ತಕಗಳ ಮೂಲಕ ತಿಳಿದುಕೊಳ್ಳಬಹುದಾಗಿದೆ ಎಂದು ಹೇಳಿದರು.
   ಈ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು  ತೇರದಾಳ ಪಟ್ಟಣದಲ್ಲಿ ದಿನಾಂಕ 22/11/ 2020 ರಂದು ಎಲ್ಲಾ ಸಮಾಜದ ಮುಖಂಡರು ಉಪಸ್ಥಿತಿಯಲ್ಲಿ ನೆರವೇರಿಸಲಾಗುವುದು ಎಂದು ಈ ಮೂಲಕ ತಿಳಿಸಿದರು. ಈ ಸಂದರ್ಭದಲ್ಲಿ ಪಟ್ಟಣದ ಗಣ್ಯ ವ್ಯಕ್ತಿಗಳು ಹಾಗೂ ಪುರಸಭೆಯ ಮಾಜಿ ಅಧ್ಯಕ್ಷರಾದ ಬಸವರಾಜ ಬಾಳಿಕಾಯಿ, ದಲಿತ ಮುಖಂಡರುಗಳಾದ ಪರಸಪ್ಪ ಮಾಸ್ತಿ, ಸದಾಶಿವ ಹಟ್ಟೆನವರ, ಸದಾಶಿವ ಸಿಂಗೆ, ಹನುಮಂತ ಜಗದಮನೆ, ಅನಿಲ ಸಿಂಗೆ, ಶಿವಾನಂದ ನಡುವಿನಕೆರಿ, ರಾಜು ರೋಡಕರ, ದಿಲೀಪ ರೊಡ್ಕರ್, ಶಂಕರಾನಂದ ಕುಂಚನೂರ, ಚಂದ್ರು ಬಾಳಿಕಾಯಿ ಲಕ್ಷ್ಮಣ ಹಟ್ಟೆನವರ ,ಇರ್ಷಾದ ನದಾಫ, ಅಭಿಷೇಕ ರೋಡಕರ ಸೇರಿದಂತೆ ಮುಂತಾದವರಿದ್ದರು.