ಬನಹಟ್ಟಿಯಲ್ಲಿ ದೀಪಾವಳಿಯ ನಿಮಿತ್ತವಾಗಿ ಹೂ ಮತ್ತು ಹೂ-ಮಾಲೆಗಳ ಮಾರಾಟ ಜೋರಾಗಿತ್ತು.

ರಬಕವಿ-ಬನಹಟ್ಟಿ: ಸಂಭ್ರಮದ ದೀಪಾವಳಿ
ರಬಕವಿ-ಬನಹಟ್ಟಿ,ನ14:ರಬಕವಿ ಬನಹಟ್ಟಿಯಲ್ಲಿ ಕೋವಿಡ್-19 ಮಧ್ಯದಲ್ಲಿಯೂ ಕೂಡಾ ಜನರು ಸಂಭ್ರಮ ಸಡಗರದ ದೀಪಾವಳಿಯನ್ನು ಆಚರಿಸಿದರು.
ಸ್ಥಳೀಯ ಹಿರಿಯ ಪ್ರಕಾರ ಈ ಬಾರಿ ನರಕ ಚತುರ್ದಶಿ ಮತ್ತು ಅಮವಾಸ್ಯೆಯನ್ನು ಎರಡನ್ನು ಒಂದೇ ದಿನ ಆಚರಸಲಾಯಿತು. ಆದ್ದರಿಂದ ಸ್ಥಳೀಯ ಮಂಗಳವಾರ ಪೇಟೆ ಜನರಿಂದ ಕಿಕ್ಕೀರಿದು ತುಂಬಿತ್ತು. ಕಬ್ಬು, ಬಾಳೆ ಗಿಡಗಳಿಗೆ, ಹೂ, ಹೂಮಾಲೆ, ಹಣ್ಣು, ಪೂಜಾ ಸಾಮಗ್ರಿಗಳಿಗೆ ಭಾರಿ ಬೇಡಿಕೆ ಇತ್ತು. ಅದರಲ್ಲೂ ಬೆಳಗ್ಗೆ ಒಂದು ಕೆ.ಜಿ. ಚಂಡು ಹೂವಿನ ಬೆಲೆ ರೂ. 300 ಗಳಿತ್ತು. ಆದರೆ ಬಹಳಷ್ಟು ಹೂ ಮಾರುಕಟ್ಟೆಗೆ ಬಂದ ಕಾರಣ ಮಧ್ಯಾಹ್ನದ ವೇಳೆಗೆ ಅರ್ಧಕ್ಕಿಂತ ಕಡಿಮೆ ದರಕ್ಕೆ ಹೂಗಳು ಮಾರಾಟಗೊಂಡವು. ಬೆಸ ಸಂಖ್ಯೆ ಬಾಳೆ ಹಣ್ಣುಗಳಿಗೆ ಜನ ಮುಗಿ ಬಿದ್ದರು. ಇವು ಕೂಡಾ ದುಬಾರಿ ಬೆಲೆಗೆ ಮಾರಾಟಗೊಂಡವು ಎಂದು ಹಣ್ಣುಗಳ ವ್ಯಾಪಾರಸ್ಥೆ ರಮೇಶ ರಾವಳ ತಿಳಿಸಿದರು.
ಇಲ್ಲಿಯ ಜನರು ಶನಿವಾರ ಸಂಜೆ ನರಕ ಚರ್ತುದರ್ಶಿಯ ಅಮವಾಸ್ಯೆ ಪೂಜೆಯನ್ನು ಸಂಭ್ರಮ ಸಡಗರದಿಂದ ಕೈಗೊಂಡರು. 
ಬೆಳಗ್ಗೆ ಅಪಾರ ಪ್ರಮಾಣದ ಜನರು ಮಾರುಕಟ್ಟೆಗೆ ಬಂದಿದ್ದರಿಂದ ಕೆಲವು ಸಮಯಗಳ ಕಾಲ ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿಯಲ್ಲಿ ಸಂಚಾರಕ್ಕೆ ತೊಂದರೆಯಾಯಿತು.