ಮಲ್ಲಿಕಾರ್ಜುನ ದೇವರ ಜಾತ್ರೆಗೆ ಚಾಲನೆ
ರಬಕವಿ-ಬನಹಟ್ಟಿ,ನ15: ನಗರದ ಸೋಮವಾರ ಪೇಟೆ ಸಮಸ್ತ ದೈವ ಮಂಡಳಿ ಹಾಗು ಮಲ್ಲಿಕಾರ್ಜುನ ಜಾತ್ರಾ ಕಮಿಟಿ ವತಿಯಿಂದ ದೀಪಾವಳಿ ಪ್ರಯುಕ್ತ ಜರುಗುವ ಮಲ್ಲಿಕಾರ್ಜುನ ಜಾತ್ರೆಗೆ ಕರೊನಾ ನಿಮಿತ್ತ ಸರಳ ರೀತಿಯಲ್ಲಿ ಆಚರಣೆಗೆ ಚಾಲನೆ ನೀಡಲಾಯಿತು.
ಶನಿವಾರ ರಾತ್ರಿ ಉಚ್ಚಾಯಕ್ಕೆ ಪೂಜೆ ಕೈಂಕರ್ಯ ನಡೆಸುವ ಮೂಲಕ ಕಾರ್ಯಕ್ರಮಗಳಿಗೆ ದೈವ ಮಂಡಳಿ ಚೇರಮನ್ ಸಂಗಣ್ಣ ಗಣೇಶನವರ ಚಾಲನೆ ನೀಡಿದರು. 
ಇಂದು ರಥೋತ್ಸವಕ್ಕೆ ಪೂಜೆ: ಸೋಮವಾರ ರಾತ್ರಿ 8 ಗಂಟೆಗೆ ನಗರದ ಹಳೆ ಅಂಚೆ ಕಚೇರಿ ಹತ್ತಿರ ಮಲ್ಲಿಕಾರ್ಜುನ ದೇವರ ರಥೋತ್ಸವಕ್ಕೆ ಪೂಜೆ ನಡೆಸುವ ಮೂಲಕ ದೀಪಾವಳಿ ಪಾಢ್ಯಮಿ ದಿನದಂದು ಜಾತ್ರೆ ನಡೆಯಲಿದೆ. 
ಶಾಸಕ ಸಿದ್ದು ಸವದಿ, ಮಾಜಿ ಸಚಿವೆ ಉಮಾಶ್ರೀ, ನಗರಸಭಾಧ್ಯಕ್ಷ ಶ್ರೀಶೈಲ ಬೀಳಗಿ, ಪೌರಾಯುಕ್ತ ಶ್ರೀನಿವಾಸ ಜಾಧವ, ವೃತ್ತ ನಿರೀಕ್ಷಕ ಜೆ. ಕರುಣೇಶಗೌಡ, ಮಂಗಳವಾರ ಪೇಟೆ ದೈವ ಮಂಡಳಿ ಚೇರಮನ್ ಶ್ರೀಶೈಲ ದಭಾಡಿ, ರೈತ ಹಾಗು ಗೌಡರ ಸಮಾಜದ ಅಧ್ಯಕ್ಷ ಸಿದ್ಧನಗೌಡ ಪಾಟೀಲ, ರಾಜು ಕುಲಕರ್ಣಿ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ.
ಕುಸ್ತಿ: ಮಂಗಳವಾರದಂದು ಮಧ್ಯಾಹ್ನ 3 ಗಂಟೆಗೆ ಅಶೋಕ ಕಾಲನಿಯ ಕುಸ್ತಿ ಮೈದಾನಕ್ಕೆ ನಗರಸಭಾ ಸದಸ್ಯ ಸದಾಶಿವ ಪರೀಠ ಪೂಜೆ ನೆರವೇರಿಸಲಿದ್ದಾರೆ.
ಕಳಸೋತ್ಸವ: ಬುಧವಾರದಂದು ಸಂಜೆ 4 ಗಂಟೆಗೆ ಕಳಸೋತ್ಸವ ಕಾರ್ಯಕ್ರಮವು ಜರುಗಲಿದೆ.