ಬನಹಟ್ಟಿಯ ತಹಶೀಲ್ದಾರ ಕಚೇರಿಯಲ್ಲಿ ಗ್ರೇಡ್-2 ತಹಶೀಲ್ದಾರ ಎಸ್.ಬಿ. ಕಾಂಬಳೆ ಅವರಿಗೆ ಜೆಡಿಎಸ್‍ನಿಂದ ಮನವಿ ಅರ್ಪಿಸಲಾಯಿತು.
ಶಾಸಕ ಸವದಿ ದೌರ್ಜನ್ಯ ಖಂಡಿಸಿ ಜೆಡಿಎಸ್‍ನಿಂದ ಮನವಿ
ರಬಕವಿ-ಬನಹಟ್ಟಿ,ನ13: ಮಹಾಲಿಂಗಪೂರ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಸಂದರ್ಭ ಮಹಿಳಾ ಜನಪ್ರತಿನಿಧಿಗಳ ಮೇಲೆ ನಡೆದ ದೌರ್ಜನ್ಯವನ್ನು ಜೆಡಿಎಸ್ ಪಕ್ಷ ಖಂಡಿಸಿತು.
ಇಂದು ತಹಶೀಲ್ದಾರ ಕಚೇರಿಯಲ್ಲಿ ಗ್ರೇಡ್-2 ತಹಶೀಲ್ದಾರ ಎಸ್.ಬಿ. ಕಾಂಬಳೆ ಅವರಿಗೆ ಮನವಿ ಅರ್ಪಿಸಲಾಯಿತು. ಪಕ್ಷದ ತಾಲೂಕಾಧ್ಯಕ್ಷ ಸುರೇಶ ಮಡಿವಾಳ ಮಾತನಾಡಿ, ಸಿದ್ದು ಸವದಿ ತಾವೊಬ್ಬ ಶಾಸಕ ಅಥವಾ ಜನಪ್ರತಿನಿಧಿ ಎನ್ನುವದನ್ನು ಪ್ರಜ್ಞೆಯಿಲ್ಲದೆ ಬೆಂಬಲಿಗರೊಂದಿಗೆ ಗೂಂಡಾ ವರ್ತನೆ ನಡೆಸುವ ಮೂಲಕ ಮಹಿಳೆಯರ ಮೇಲೆ ರಾಕ್ಷಸ ರೀತಿಯ ಕಾರ್ಯ ನಡೆಸಿ, ಮಹಿಳಾ ಕುಲಕ್ಕೆ ಅವಮಾನ ಮಾಡಿದ್ದಾರೆಂದು ತೀವ್ರ ಬೇಸರ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಬದ್ಧವಾಗಿ ಚುನಾಯಿತಗೊಂಡಿರುವ ಜನಪ್ರತಿನಿಧಿಗಳಿಗೆ ದಬ್ಬಾಳಿಕೆ ಹಾಗು ಬೆದರಿಕೆವೊಡ್ಡುತ್ತಿರುವದು ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಸಾಮಾನ್ಯವಾಗಿದ್ದು, ಬಿಜೆಪಿಯು ಇಂತಹ ನೀಚಜ ಕೃತ್ಯಗಳನ್ನು ಎಸಗುವದನ್ನು ಬಿಡಬೇಕು. ಗರ್ಭೀಣಿ ಮಹಿಳಾ ಸದಸ್ಯೆಯನ್ನು ಅಮಾನವೀಯವಾಗಿ ತಳ್ಳಾಡಿ, ದೈಹಿಕ ಹಾಗು ಮಾನಸಿಕ ಹಿಂಸೆ ನೀಡಿದ್ದು ಸಮಾಜದಲ್ಲಿನ ಅನಾಗರಿಕತೆಯನ್ನು ತೋರಿಸುತ್ತದೆ.
ಈ ಕುರಿತು ತಾಲೂಕು ಹಾಗು ಜಿಲ್ಲಾಡಳಿತ ಎಲ್ಲವನ್ನೂ ಗಮನಿಸಿದ್ದು, ಶೀಘ್ರ ಉನ್ನತಮಟ್ಟದ ಅಧಿಕಾರಿಗಳು ಪರಿಶೀಲನೆ ನಡೆಸಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಜೆಡಿಎಸ್ ಒತ್ತಾಯಿಸುತ್ತದೆ ಎಂದು ಮಡಿವಾಳ ಹೇಳಿದರು.
ಇದೇ ಸಂದರ್ಭ ತೇರದಾಳ ತಾಲೂಕು ಘಟಕ ಅಧ್ಯಕ್ಷ ಭುಜಬುಲಿ ಕೆಂಗಾಲಿ, ವಿಜುಗೌಡ ಪಾಟೀಲ, ವಿರೇಶ ನ್ಯಾಮಗೌಡ, ರಘು ಅಂಬಿ, ಶಿವ ನಾಯಕ, ಗಿರೀಶ ಹೇಗಾಡಿ, ಮನೋಜ ಯಾದವಾಡ, ಗಂಗಪ್ಪ ಜಕ್ಕನ್ನವರ, ಮಹಾಂತೇಶ ಖವಾಸಿ, ಸತ್ಯಪ್ಪ ಮಹಿಷವಾಡಗಿ, ಶಿವಪ್ಪ ಖವಾಸಿ, ಸಿದ್ದಪ್ಪ ಹುದ್ದಾರ, ಬಾಬಸಾಹೇಬ ದೇಸಾಯಿ, ಈರಪ್ಪ ಹಂದಿಗುಂದ, ಶಂಕರ ಪಾತ್ರೋಟ, ಸಿದ್ಧರಾಜ ಸೇರಿದಂತೆ ಅನೇಕರಿದ್ದರು.

Social Plugin