ಫೋಟೊ ವಿವರ-ರಬಕವಿಯಲ್ಲಿ ಸುಟ್ಟು ಕರಕಲಾಗಿರುವ ಕಬ್ಬನ್ನು ವಿಕ್ಷಿಸುತ್ತಿರುವ ಅಧಿಕಾರಿಗಳು
ವಿದ್ಯುತ್ ಅವಘಡ: ಕಬ್ಬಿನ ಬೆಳೆ ನಾಶ
ರಬಕವಿ-ಬನಹಟ್ಟಿ,5: ಆಕಸ್ಮಿಕವಾಗಿ ವಿದ್ಯುತ್ ವೈರ್‍ನಿಂದ ಉಂಟಾದ ಬೆಂಕಿಯಿಂದ ಸುಮಾರು ಒಂದು ಎಕರೆಯಲ್ಲಿದ್ದ ಕಬ್ಬು ಸಂಪೂರ್ಣ ಬೆಂಕಿಗೆ ಆಹುತಿಯಾಗಿರುವ ಘಟನೆ ರಬಕವಿಯಲ್ಲಿ ನಡೆದಿದೆ.
ವರ್ಷವಿಡೀ ಕಷ್ಟಪಟ್ಟು ಬೆಳೆದ ಕಬ್ಬು ಸಂಪೂರ್ಣ ಇನ್ನೇನು ಕಟಾವು ಸಂದರ್ಭದಲ್ಲಿ ಅಗ್ನಿ ಅವಘಡದಿಂದ ಸಂಪೂರ್ಣ ನಾಶವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಸುಟ್ಟು ಕರಕಲಾದ ಕಬ್ಬನ್ನು ನೋಡಿ ರೈತರು ಕಣ್ಣೀರು ಹಾಕುವಂತಾಗಿದೆ. ರೈತನ ಕುಟುಂಬದ ಸುಟ್ಟ ಕಬ್ಬಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಸರಕಾರಕ್ಕೆ ಆಗ್ರಹಿಸಿದ್ದಾರೆ.
ಈ ಕುರಿತು ಸ್ಥಳಕ್ಕೆ ಆಗಮಿಸಿದ ರಬಕವಿ ಗ್ರಾಮಲೆಕ್ಕಾಧಿಕಾರಿ ಮಂಜುನಾಥ ನೀಲನ್ನವರ ಹಾನಿಯಾದ ಕಬ್ಬನ್ನು ಪರಿಶೀಲಿಸಿ ಸರ್ಕಾರಕ್ಕೆ ಮಾಹಿತಿ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.

Social Plugin