ಬನಹಟ್ಟಿಯ ಕಾಡಸಿದ್ಧೇಶ್ವರ ದೇವಸ್ಥಾನ ಮುಂಭಾಗದಲ್ಲಿನ ಚರಂಡಿ ತ್ಯಾಜ್ಯ ತೆರವುಗೊಳಿಸುತ್ತಿರುವದು.
ಚರಂಡಿ ತ್ಯಾಜ್ಯ ತೆರವು-
ರಬಕವಿ-ಬನಹಟ್ಟಿ,ನ21: ನಗರದ ಕಾಡಸಿದ್ಧೇಶ್ವರ ಹಾಗು ಬಾಲಾಜಿ ದೇವಸ್ಥಾನ ಮುಂಭಾಗದಲ್ಲಿ ಒಳಚರಂಡಿ ಅಭಿವೃದ್ಧಿ ಸಂದರ್ಭ ಅಪಾರ ಪ್ರಮಾಣದ ತ್ಯಾಜ್ಯವನ್ನು ರಸ್ತೆಯ ಮೇಲೆ ಹಾಕಿ ನಿರ್ಲಕ್ಷ್ಯದಿಂದ ಹಾಗೆ ಬಿಟ್ಟಿದ್ದನ್ನು ಸಾರ್ವಜನಿಕರು ಹಿಡಿಶಾಪ ಹಾಕುವದರೊಂದಿಗೆ ದಿನಂಪ್ರತಿ ಬರುವ ಭಕ್ತರಿಗೆ ತುಂಬಾ ತೊಂದರೆಯಾಗುತ್ತಿರುವದನ್ನು ಕಳೆದೆರಡು ದಿನಗಳ ಹಿಂದೆ ಪತ್ರಿಕೆ ಸುದ್ದಿ ಮಾಡಿತ್ತು.
ಇದನ್ನರಿತ ನಗರಸಭೆ ಸಿಬ್ಬಂದಿಗಳು ಬೃಹದಾಕಾರದ ಗುಡ್ಡೆಯಾಗಿ ರಸ್ತೆಯ ಮೇಲಿದ್ದ ತ್ಯಾಜ್ಯವನ್ನು ತೆರವುಗೊಳಿಸುವ ಮೂಲಕ ಜನರಿಗೆ ಸುಲಭ ಸಂಚಾರಕ್ಕೆ ಅವಕಾಶ ಕಲ್ಪಿಸುವಲ್ಲಿ ಯಶಸ್ವಿಯಾದರು.
ಈ ರೀತಿ ತ್ಯಾಜ್ಯವನ್ನು ಪಟ್ಟಣದಾದ್ಯಂತ ಅಲ್ಲಲ್ಲಿ ನಿರ್ಲಕ್ಷ್ಯಕ್ಕೀಡಾಗಿ ತ್ಯಾಜ್ಯಗಳನ್ನು ತೆರವುಗೊಳಿಸುವಲ್ಲಿ ವಿಳಂಬವಾಗುತ್ತಿದ್ದು, ಈ ರೀತಿಯಾಗದಂತೆ ನಗರಸಭೆ ಅಧಿಕಾರಿಗಳು ಎಚ್ಚರವಹಿಸಬೇಕಿದೆ.