ಬಿಡಿಸಿಸಿ ಚುನಾವಣೆ ; ರಬಕವಿ-ಬನಹಟ್ಟಿ ಪಿಕೆಪಿಎಸ್‍ನಿಂದ ಶಾಸಕ ಸಿದ್ದು ಸವದಿ ಆಯ್ಕೆ
ರಬಕವಿ-ಬನಹಟ್ಟಿ,ನ6: ಬಾಗಲಕೋಟೆಯ ಬಿಡಿಸಿಸಿ ಸಹಾಕರಿ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆಯಲ್ಲಿ ರಬಕವಿ-ಬನಹಟ್ಟಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಂದ ಸ್ಪರ್ಧಿಸಿದ್ದ ಶಾಸಕ ಸಿದ್ದು ಸವದಿ 18 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.
ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಸಹಕಾರಿ ಧುರೀಣ ಭೀಮಸಿ ಮಗದುಮ್ ಅವರ ವಿರುದ್ಧ ಜಯ ಸಾಧಿಸಿದ್ದಾರೆ. ಶಾಸಕ ಸಿದ್ದು ಸವದಿ ಒಟ್ಟು 18 ಮತಗಳನ್ನು ಪಡೆದರೆ ಭೀಮಸಿ ಮಗದುಮ್ 9 ಮತಗಳನ್ನು ಪಡೆದುಕೊಂಡರು.
ಕಾರ್ಯಕರ್ತರಿಂದ ವಿಜಯೋತ್ಸವ : ಶಾಸಕ ಸಿದ್ದು ಸವದಿ ಬಿಡಿಸಿಸಿ ಚುನಾವಣೆಯಲ್ಲಿ ಆಯ್ಕೆಯಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಗುಲಾಲ ಹಚ್ಚಿ ವಿಜಯೋತ್ಸವವನ್ನು ಆಚರಿಸಿದರು. ಈ ಸಂದರ್ಭದಲ್ಲಿ ವಿದ್ಯಾಧರ ಸವದಿ, ಬಾಬಾಗೌಡ ಪಾಟೀಲ, ಸುಭಾಸ ಉಳ್ಳಾಗಡ್ಡಿ, ಧರೆಪ್ಪ ಉಳ್ಳಾಗಡ್ಡಿ, ಬಸವರಾಜ ತೆಗ್ಗಿ, ಎಂ. ಬಿ. ನಾಶಿ, ಲಕ್ಕಪ್ಪ ಪಾಟೀಲ, ಈಶ್ವರ ಪಾಟೀಲ, ಸಂಜಯ ತೆಗ್ಗಿ, ಸುರೇಶ ಅಕ್ಕಿವಾಟ, ಆನಂದ ಕಂಪು, ಮಹಾವೀರ ಬೀಲವಡಿ, ಶ್ರೀಶೈಲ ದಲಾಲ, ಭೀಮಸಿ ಪಾಟೀಲ, ಭೀಮಸಿ ಹಂದಿಗುಂದ, ಮಲಕಪ್ಪ ಪಾಟೀಲ, ಪುಂಡಲಿಕ ಪಾಲಬಾಂವಿ, ಬಸನಗೌಡ ಪಾಟೀಲ, ರಮೇಶ ಕಿತ್ತೂರ ಸೇರಿದಂತೆ ನೂರಾರೂ ಕಾರ್ಯಕರ್ತರು ಇದ್ದರು.

Social Plugin