ಬನಹಟ್ಟಿ ಹಟಗಾರ ಪತ್ತಿನ ಸಹಕಾರಿ ಸಂಘದ ಮಹಾಸಭೆಯಲ್ಲಿ ಸಂಘದ ನಿರ್ದೇಶಕ ವೀರುಪಾಕ್ಷಪ್ಪ ಕೊಕಟನೂರ ಮಾತನಾಡಿದರು.


                  ನೇಕಾರ ಶ್ರೇಯೋಭಿವೃದ್ಧಿಗೆ ಹಟಗಾರ ಸೊಸೈಟಿಯ ಶ್ರಮ ಅಪಾರ

ರಬಕವಿ-ಬನಹಟ್ಟಿ,ನ28: ನೇಕಾರರಿಗೆ ಸಂಜೀವಿನಿಯಾಗಿ ನೇಕಾರರ ಅಭ್ಯುದಯಕ್ಕೆ ಶ್ರಮಿಸುವಲ್ಲಿ ಪಾತ್ರವಾಗಿರುವ ಬನಹಟ್ಟಿ ಹಟಗಾರ ಪತ್ತಿನ ಸಹಕಾರಿ ಸಂಘವು ಸತತ 26 ವರ್ಷಗಳಿಂದ ನೇಕಾರರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದು ಬನಹಟ್ಟಿ ಹಟಗಾ ಸಹಕಾರಿ ಪತ್ತಿನ ಸಂಘದ ಸದಸ್ಯ ವಿರುಪಾಕ್ಷಪ್ಪ ಕೊಕಟನೂರ ಹೇಳಿದರು.

ಶನಿವಾರ ನಗರದ ಭದ್ರನ್ನವರ ಕಲ್ಯಾಣ ಮಂಟಪದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಸಂಘದ ಏಳ್ಗೆಗೆ ನೇಕಾರ ಸಮುದಾಯದ ಪಾತ್ರ ಹಿರಿದಾಗಿದೆ. ಅಲ್ಲದೆ ಸರ್ಕಾರದ ಶೇ.1 ಮತ್ತು ಶೆ.3 ರ ಬಡ್ಡಿ ಆಕರಣೆಯಲ್ಲಿ ಒದಗಿಸುತ್ತಿರುವ ಸಾಲದಿಂದ ಈ ಭಾಗದ ನೇಕಾರರ ಜೀವನಮಟ್ಟ ಸುಧಾರಿಸುವಲ್ಲಿ ಕಾರಣವಾಗಿರುವದು ಹೆಮ್ಮೆ ತರುವಂತದ್ದು ಎಂದರು. 

ಇದೇ ಸಂದರ್ಭ ಶಂಕರ ಜುಂಜಪ್ಪನವರ ಮಾತನಾಡಿ, ನಿರಂತರ ಹಾಗು ಪರಿಣಾಮಕಾರಿಯಾಗಿ ಸದಸ್ಯರ ವಿಶ್ವಾಸದೊಂದಿಗೆ ಅಮೂಲಾಗ್ರ ಬದಲಾವಣೆಯೊಂದಿಗೆ ಅಭಿವೃದ್ಧಿ ಹೊಂದಿರುವ ಸಂಘದ ಸಾಧನೆ ಅಪ್ರತಿಮವಾದುದು. ಪೈಪೋಟಿ ಯುಗದಲ್ಲಿ ಕಡಿಮೆ ಬಡ್ಡಿ ಸಾಲ ಹಾಗು ಗರಿಷ್ಠ ದರದ ಠೇವು ಸಾಮಾನ್ಯ ಬೇಡಿಕೆ. ರಾಷ್ಟ್ರೀಕೃತ ಬ್ಯಾಂಕ್‍ಗಲ ಪೈಪೋಟಿಯ ಮಧ್ಯ ಸಹಕಾರಿ ಸಂಘಗಳ ಬೆಳವಣಿಗೆ ಮೆಚ್ಚುವಂಥದ್ದು ಎಂದರು.

ಸಂಜಯ ಜವಳಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಸುಸ್ತಿ ಸಾಲದ ಮುದ್ಧತ ಪ್ರಮಾಣ ಕಡಿಮೆಯಾದಾಗ ಸಂಘದ ಅಭಿವೃದ್ಧಿ ಸಾಧ್ಯ. ಶೇರುದಾರರ ಇದಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಬೇಕೆಂದರು.

ನೂಲಿನ ಗಿರಣಿ ಅಧ್ಯಕ್ಷ ವಿಜಯಕುಮಾರ ಭದ್ರನ್ನವರ, ಗಜಾನನ ವಿದ್ಯುತ್ ಮಗ್ಗಗಳ ಸಹಕಾರಿ ಸಂಘದ ಅಧ್ಯಕ್ಷ ಘೂಳಪ್ಪ ಮೊಳೆಗಾಂವಿ, ರಾಮಣ್ಣ ಭದ್ರನ್ನವರ, ನಿಂಗಪ್ಪ ಹೊನವಾಡ, ದೇವೇಂದ್ರಪ್ಪ ಚನಪ್ನವರ, ರಾಜು ಬಾಣಕಾರ, ಚನವೀರಪ್ಪ ಬಾಣಕಾರ, ದಾನಪ್ಪ ಹುಲಜತ್ತಿ, ಮಹಾದೇವ ಬಾಣಕಾರ, ಮಲ್ಲಿಕಾರ್ಜುನ ಮೊಳೆಗಾಂವಿ, ಕಾಡಪ್ಪ ಹಳಿಂಗಳಿ, ಹೇಮಲತಾ ಪಟ್ಟಣ, ದ್ರಾಕ್ಷಾಯಿಣಿ ಕುಲಗೋಡ ಉಪಸ್ಥಿತರಿದ್ದರು. ಉದಯ ಜಾಡಗೌಡ ಸ್ವಾಗತಿಸಿದರು. ರಾಜು ಕೋಲಾರ ನಿರೂಪಿಸಿದರು.  ರಾಜು ಮಂಡಿ ವಂದಿಸಿದರು. 

ಸಿದ್ರಾಮಪ್ಪ ಸವದತ್ತಿ, ಪ್ರಕಾಶ ಕಣಗೊಂಡ, ರಮೇಶ ಮಹಿಷವಾಡಗಿ, ಮಲ್ಲಣ್ಣ ಕಕಮರಿ, ಶಂಕರ ಜಾಲಿಗಿಡದ, ಓಂಪ್ರಕಾಶ ಕಾಬರಾ, ಮಹಾದೇವ ಚರ್ಕಿ, ದುಂಡಪ್ಪ ಮಾಚಕನೂರ, ಭಿಮಶಿ ಕುಲಗೋಡ, ಶಶಿಕಾಂತ ಹುನ್ನೂರ, ಶಾಂತಾ ಸೊರಗಾಂವಿ, ಶ್ರೀಶೈಲ ಭದ್ರನ್ನವರ, ಈರಣ್ಣ ಬಾಣಕಾರ, ಸುರೇಶ ಬೀಳಗಿ, ರಾಜಶೇಖರ ಶಿವಪೂಜಿ ಸೇರಿದಂತೆ ಅನೇಕರಿದ್ದರು.