ಬಿಡಿಸಿಸಿ ಬ್ಯಾಂಕ್ ಚುನಾವಣೆ: ಕಣದಿಂದ ನಿವೃತ್ತಿ
ರಬಕವಿ-ಬನಹಟ್ಟಿ,ನ4: ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಇದರ ರಬಕವಿ-ಬನಹಟ್ಟಿ ತಾಲೂಕಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮತಕ್ಷೇತ್ರದಿಂದ ನಿರ್ದೇಶಕ ಮಂಡಳಿ ಚುನಾವಣೆಯ ಕಣದಲ್ಲಿದ್ದ ಮಹಾಲಿಂಗಪೂರದ ಬಸವರಾಜ ಮಹಾಲಿಂಗಪ್ಪ ಪಾಟೀಲ ಅವರ ಚುನಾವಣಾ ಗುರ್ತು `ಗ್ಯಾಸ್ ಸಿಲಿಂಡರ್’ ಆಗಿತ್ತು. ಕೊನೆಯ ಕ್ಷಣದಲ್ಲಿ ಕಣದಿಂದ ನಿವೃತ್ತಿಯಾಗುವ ಮೂಲಕ ತೇರದಾಳ ವಿಧಾನಸಭಾ ಕ್ಷೇತ್ರದ ಶಾಸಕ ಸಿದ್ದಪ್ಪ ಕಲ್ಲಪ್ಪ ಸವದಿ ಅವರ ಗುರ್ತಾದ `ಅಟೋ ರಿಕ್ಷಾ’ ಅವರಿಗೆ ಬೆಂಬಲ ಸೂಚಿಸಿದ್ದೇನೆಂದು ಪತ್ರಿಕೆಗೆ ತಿಳಿಸುವದರೊಂದಿಗೆ ಮಾನ್ಯ ಮತದಾರ ಬಾಂಧವರು ನನ್ನ ಬದಲಾಗಿ ಸಿದ್ದಪ್ಪ ಕಲ್ಲಪ್ಪ ಸವದಿಯವರಿಗೆ ಮತಚಲಾಯಿಸುವದರೊಂದಿಗೆ ಗೆಲುವಿಗೆ ಶ್ರಮಿಸುವಂತೆ ಬಸವರಾಜ ಮಹಾಲಿಂಗಪ್ಪ ಪಾಟೀಲ ಮಾಡಿದ್ದಾರೆ