ರಬಕವಿ-ಬನಹಟ್ಟಿ ತಹಶೀಲ್ದಾರ ಕಾರ್ಯಾಲಯದಲ್ಲಿ ವಿಕಲಚೇತನರ ಇಲಾಖೆ ವತಿಯಿಂದ ದ್ವಿಚಕ್ರ ವಾಹನ ವಿತರಿಸಿದ ಶಾಸಕ ಸಿದ್ದು ಸವದಿ 

ಸೌಲಭ್ಯ ಸದುಪಯೋಗವಾಗಲಿ-ಸವದಿ
ರಬಕವಿ-ಬನಹಟ್ಟಿ,ನ3: ವಿಕಲಚೇತನರು ಸರಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತೇರದಾಳ ಮತಕ್ಷೇತ್ರದ ಶಾಸಕ ಹಾಗೂ ಕೆಎಚ್‍ಡಿಸಿ ನಿಗಮದ ಅಧ್ಯಕ್ಷ ಸಿದ್ದು ಸವದಿ ಹೇಳಿದರು. 
ನಗರದ ತಹಶೀಲ್ದಾರ ಕಛೇರಿಯ ಆವರಣದಲ್ಲಿ ವಿಕಲಚೇತನರ ಇಲಾಖೆಯ ವತಿಯಂದ 70 ಸಾವಿರ ವೆಚ್ಚದ ಎರಡು ವಾಹನಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ವಿಕಲಚೇತನರು ಸ್ವಾವಕಂಭಿಗಳಾಗಿ ಜೀವನ ಸಾಗಿಸುವ ನಿಟ್ಟಿನಲ್ಲಿ ಸರಕಾರ ಕೊಡಮಾಡಿದ ವಾಹನಗಳನ್ನು ಸದುಪಯೋಗ ಪಡಿಸಿಕೊಳ್ಳಿ ಇವುಗಳನ್ನು ಬೇರೆಯವರಿಗೆ ಹಸ್ತಾಂತರಿಸುವುದಾಗಲಿ ಮಾರುವುದಾಗಲಿ ಮಾಡಬಾರದು. ಅವುಗಳನ್ನು ಸ್ವಂತಕ್ಕೆ ಬಳಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಬನಹಟ್ಟಿಯ ದೊಡ್ಡವ್ವ ಸರ್ವಿ ಹಾಗೂ ಢವಳೇಶ್ವರದ ಪ್ರಕಾಶ ಪಾಟೀಲ ಅವರಿಗೆ ದ್ವೀಚಕ್ರವಾಹನವನ್ನು ವಿತರಿಸಲಾಯಿತು. 
ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಶಾಂತ ಚನಗೊಂಡ, ತಾ. ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಂಜೀವ ಹಿಪ್ಪರಗಿ, ಉಪತಹಶೀಲ್ದಾರ ಎಸ್. ಎಲ್. ಕಾಗಿಯವರ, ವೃತ್ತ ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ, ಪ್ರಕಾಶ ವಂದಾಲ, ತಾಲೂಕು ವಿಕಲಚೇತನರ ಅಧಿಕಾರಿ ನಿಂಗರಾಜ ಹನಗಂಡಿ, ಶಬ್ಬಿರ ಪಕ್ಕಾಲಿ, ನಾಗಪ್ಪ ಪಾಟೀಲ ಸೇರಿದಂತೆ ಅನೇಕರು ಇದ್ದರು.