ತೇರದಾಳದ ಕ್ಷೇತ್ರಾಧಿಪತಿ ಶ್ರೀ ಅಲ್ಲಮಪ್ರಭುದೇವರ ಪಾಲಕಿ ಹಾಗೂ ನಂದಿಕೋಲು ಉತ್ಸವ ವಿಜೃಂಭಣೆಯಿಂದ ಜರುಗಿತು.
ಕಡೇ ಪಾಡ್ಯ ನಿಮಿತ್ಯ ಅಲ್ಲಮಪ್ರಭುದೇವರ ಸಂಭ್ರಮದ ಪಲ್ಲಕ್ಕಿ ಉತ್ಸವ
ತೇರದಾಳ : ದೀಪಾವಳಿ ಹಬ್ಬದ ಕಡೇಪಾಡ್ಯದಂದು ತೇರದಾಳ ಪಟ್ಟಣದ ಜನತೆ ಶ್ರೀಅಲ್ಲಮಪ್ರಭುದೇವರ ಪಲ್ಲಕ್ಕಿ ಉತ್ಸವ, ನಂದಿಕೋಲುಗಳ ಉತ್ಸವದಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಪ್ರತಿ ವರ್ಷದಂತೆ ಈ ವರ್ಷವು ದೀಪಾವಳಿ ಕಡೇ ಪಾಡ್ಯ ನಿಮಿತ್ಯ ಕ್ಷೇತ್ರಾಧಿಪತಿ ಶ್ರೀಅಲ್ಲಮಪ್ರಭುದೇವರ ದೇವಾಲಯದಲ್ಲಿಪ್ರಾತಃಕಾಲ ಜಾಗಟೆ, ನಗಾರಿ, ತಾಳ, ಸಂಬಾಳವಾದನದೊಂದಿಗೆ ವಿಶೇಷ ಪೂಜೆ ನಡೆಯಿತು. ಮದ್ಯಾನ್ಹ 12ಗಂಟೆಗೆ ಹೂಗಳಿಂದಲಂಕೃತವಾದ ಕ್ಷೇತ್ರಾಧಿಪತಿ ಶ್ರೀಅಲ್ಲಮಪ್ರಭುದೇವರ ಪಾಲಕಿ ಮತ್ತು ನಂದಿಕೋಲುಗಳ ಉತ್ಸವ ಆರಂಭವಾಯಿತು.
ಊರಿನ ಧಣಿಗಳಾದ ಪ್ರವೀಣ ಪಿ.ನಾಡಗೌಡ ಕುಟುಂಬ ವರ್ಗದವರು, ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ, ದೇವಾಲಯದ ಅರ್ಚಕರು, ಕರಡಿ ಮಜಲಿನ ವಿವಿಧ ಕಲಾವಿದರು, ವಚನಪಠಣದೊಂದಿಗೆ ಕಲಾವಿದರು, ಸದ್ಭಕ್ತರು, ದೇವಾಲಯದ ಸಮಸ್ತ ಅರ್ಚಕವೃಂದ ಉತ್ಸವದಲ್ಲಿ ಭಾಗವಹಿಸಿದ್ದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇಸಾರ ಭಾವಿಗೆ ಬಂದು ಉತ್ಸವ ಸಂಪನ್ನಗೊಂಡಿತು. ಪಾಲಕಿ ಉತ್ಸವ ಬರುವ ದಾರಿಯುದ್ದಕ್ಕೂ ನೀರು ಹಾಕಿ, ರಂಗೋಲಿ ಬಿಡಿಸಿ ಅಲ್ಲಲ್ಲಿ ತೆಂಗಿನ ಪೊರಕೆಗಳನ್ನು ಕಟ್ಟಿ ಪಟ್ಟಣವನ್ನು ಸಿಂಗರಿಸಲಾಗಿತ್ತು. ಪಾಲಕಿ ಉತ್ಸವ ಬರುವ ದಾರಿಯಲ್ಲಿ ಶರಬತ್ ಸೇವೆ ಮಾಡಿ ಸದ್ಭಕ್ತರಿಗೆ ಹಂಚುತ್ತಿದ್ದರು. ಸದ್ಭಕ್ತರು ಸಕ್ಕರೆಯ ನೈವಿದ್ಯೆ ಕೊಟ್ಟು ತಮ್ಮ ಭಕ್ತಿಯನ್ನು ಸಮರ್ಪಿಸಿದರು.
Social Plugin